ಸಾರಾಂಶ
ನವದೆಹಲಿ: ಭಾರತದ ಆಕ್ಷೇಪದ ನಡುವೆಯೂ ಪಾಕಿಸ್ತಾನಕ್ಕೆ 6800 ಕೋಟಿ ರು. ಆರ್ಥಿಕ ನೆರವು ನೀಡಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) 8500 ಕೋಟಿ ರು. ಹಣಕಾಸು ನೆರವು ನೀಡಲು ಒಪ್ಪಿಗೆ ನೀಡಿದ ಬೆನ್ನಲ್ಲೇ, ಇದೀಗ ಎಡಿಬಿಯಿಂದಲೂ ಪಾಕಿಸ್ತಾನಕ್ಕೆ ಸಾಲದ ನೆರವು ಹರಿದು ಬರಲಿದೆ.
ಪಾಕಿಸ್ತಾನದ ಹಣಕಾಸು ಸುಸ್ಥಿರತೆ ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣೆಗೆಯನ್ನು ಬಲಪಡಿಸಲು ಈ ನೆರವು ನೀಡುತ್ತಿರುವುದಾಗಿ ಎಡಿಬಿ ಹೇಳಿಕೊಂಡಿದೆ.
ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡುವ ಕ್ರಮಕ್ಕೆ ಭಾರತವು ಸ್ಪಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಣವನ್ನು ಪಾಕಿಸ್ತಾನವು ಮಿಲಿಟರಿ ಉದ್ದೇಶಕ್ಕೆ ಹಾಗೂ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಲು ಬಳಸಬಹುದು ಎಂಬುದು ಭಾರತದ ಆಕ್ಷೇಪವಾಗಿತ್ತು. ಇದರ ಜತೆಗೆ ಪಾಕಿಸ್ತಾನದ ಜಿಡಿಪಿಯ ಶೇ.13ರಷ್ಟಿದ್ದ ತೆರಿಗೆ ಆದಾಯವು 2023ರಲ್ಲಿ ಶೇ.9.3ಕ್ಕೆ ಕುಸಿದಿದೆ ಮತ್ತು ರಕ್ಷಣಾ ವೆಚ್ಚವು ಹೆಚ್ಚಾಗಿದೆ. ಈ ಮೂಲಕ ಪಾಕಿಸ್ತಾನವು ಆರ್ಥಿಕವಾಗಿ ದುರ್ಬಲಗೊಂಡಿದೆ ಎಂದೂ ವಾದಿಸಿತ್ತು.

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))