ಪಾಕ್‌ ಕಣ್ಣು ಭಾರತದ ಮೇಲೆ, ಭಾರತದ ಕಣ್ಣು ಚೀನಾ ಮೇಲೆ

| N/A | Published : May 26 2025, 12:50 AM IST / Updated: May 26 2025, 04:45 AM IST

ಸಾರಾಂಶ

  ಭಾರತ ಮಾತ್ರ ಪಾಕಿಸ್ತಾನವನ್ನು ಕೇವಲ ಭದ್ರತಾ ಆಪಾಯದ ದೇಶ ಎಂದು ನಂಬಿದೆ. ಆದರೆ ಮತ್ತೊಂದು ನೆರೆಯ ರಾಷ್ಟ್ರ ಚೀನಾವನ್ನು ಪ್ರಮುಖ ಎದುರಾಳಿ ಎಂದು ಭಾವಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.

 ವಾಷಿಂಗ್ಟನ್‌: ಪಾಕಿಸ್ತಾನವು ಭಾರತವನ್ನು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವ ಶಕ್ತಿ ಎಂದು ಪರಿಗಣಿಸಿದ್ದರೆ, ಭಾರತ ಮಾತ್ರ ಪಾಕಿಸ್ತಾನವನ್ನು ಕೇವಲ ಭದ್ರತಾ ಆಪಾಯದ ದೇಶ ಎಂದು ನಂಬಿದೆ. ಆದರೆ ಮತ್ತೊಂದು ನೆರೆಯ ರಾಷ್ಟ್ರ ಚೀನಾವನ್ನು ಪ್ರಮುಖ ಎದುರಾಳಿ ಎಂದು ಭಾವಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.

ಅಮೆರಿಕದ ಗುಪ್ತಚರ ಸಂಸ್ಥೆಯು 2025ನೇ ಸಾಲಿನ ಜಾಗತಿಕ ಗುಪ್ತಚರ ಅಂದಾಜು ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಈ ಅಂಶವಿದೆ. ಭಾರತದ ಜೊತೆಗಿನ ಪಾಕ್ , ಚೀನಾ ಮತ್ತು ರಷ್ಯಾ ನಡುವಿನ ಸಂಬಂಧದ ಬಗ್ಗೆ ಉಲ್ಲೇಖಿಸಿದೆ.

ವರದಿಯಲ್ಲೇನಿದೆ?:

ಅಮೆರಿಕದ ಗುಪ್ತಚರ ಸಂಸ್ಥೆ ವರದಿ ಪ್ರಕಾರ, ಪಾಕಿಸ್ತಾನವು ಭಾರತವನ್ನು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವ ದೇಶ ಎಂದು ಪರಿಗಣಿಸಿದೆ. ಭಾರತ ಸೇನಾ ಸಾಮರ್ಥ್ಯಕ್ಕೆ ಪೈಪೋಟಿ ನೀಡಲು ತನ್ನ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಧುನೀಕರಣ ಗೊಳಿಸಲು ಯತ್ನಿಸುತ್ತಿದೆ. ಆದರೆ ಭಾರತ ಎಂದಿಗೂ ಆ ರೀತಿ ಪರಿಗಣಿಸಿಲ್ಲ. ಇತ್ತೀಚೆಗಿನ ಸಂಘರ್ಷದ ಹೊರತಾಗಿಯೂ ಪಾಕಿಸ್ತಾನವನ್ನು ಭಾರತವು ತನ್ನ ಭದ್ರತಾ ಸಮಸ್ಯೆ ಎಂದಷ್ಟೇ ಪರಿಗಣಿಸಿದೆ ಎಂದು ವರದಿ ಹೇಳಿದೆ.

ಮತ್ತೊಂದು ಅಚ್ಚರಿಯ ಅಂಶವನ್ನು ವರದಿಯಲ್ಲಿ ಹೇಳಲಾಗಿದ್ದು, ಭಾರತ ತನ್ನ ಪಕ್ಕಕ್ಕಿರುವ ಪಾಕ್‌ನ್ನು ಎಂದಿಗೂ ಎದುರಾಳಿ ರಾಷ್ಟ್ರ ಎಂದು ಪರಿಗಣಿಸಿಲ್ಲ, ಆದರೆ ಮತ್ತೊಂದು ನೆರೆಯ ದೇಶ ಚೀನಾವನ್ನು ಎದುರಾಳಿ ಎಂದು ಭಾವಿಸಿದೆ, ಚೀನಾವನ್ನು ಸಮರ್ಥವಾಗಿ ಎದುರಿಸಲು ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದಿದೆ.

ಇನ್ನು ಭಾರತ ಮಿಲಿಟರಿ ಉತ್ಪನ್ನಗಳ ವಿಚಾರದಲ್ಲಿ ಸ್ವಾಲಂಬನೆಗೆ ಪ್ರಯತ್ನಿಸುತ್ತಿದ್ದು, ಮೋದಿ ಅಧಿಕಾರಕ್ಕೆ ಬಂದ ಬಳಿಕ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಷ್ಯಾದಿಂದ ಶಸ್ತ್ರಾಸ್ತ್ರಗಳ ಖರೀದಿ ಕಡಿಮೆಯಾಗಿದೆ ಎಂದಿದೆ.

ಆದರೆ ಚೀನಾ ಮತ್ತು ಪಾಕಿಸ್ತಾನದ ಎದುರಿಸಲು ರಷ್ಯಾದ ಟ್ಯಾಂಕರ್‌, ಯುದ್ಧ ವಿಮಾನಗಳ ನಿರ್ವಹಣೆಗೆ ರಷ್ಯಾದ ಬಿಡಿಭಾಗಗಳನ್ನು ಅವಲಂಬಿಸಿದೆ ಎಂದಿದೆ.

Read more Articles on