ಸಾರಾಂಶ
ಆಪರೇಷನ್ ಸಿಂದೂರ್ ಮೂಲಕ ಪಾಕ್ ಉಗ್ರನೆಲೆಗಳನ್ನು ಧ್ವಂಸಗೊಳಿಸಿದ ಭಾರತದ ವಿರುದ್ಧ ಪಾಕ್ ಕೆಂಡಾಮಂಡಲವಾಗಿದ್ದು, ಪಾಕ್‌ನ ಭಾರತೀಯ ರಾಯಭಾರಿ ಜತೆ ಮಾತನಾಡಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇಸ್ಲಾಮಾಬಾದ್: ಆಪರೇಷನ್ ಸಿಂದೂರ್ ಮೂಲಕ ಪಾಕ್ ಉಗ್ರನೆಲೆಗಳನ್ನು ಧ್ವಂಸಗೊಳಿಸಿದ ಭಾರತದ ವಿರುದ್ಧ ಪಾಕ್ ಕೆಂಡಾಮಂಡಲವಾಗಿದ್ದು, ಪಾಕ್‌ನ ಭಾರತೀಯ ರಾಯಭಾರಿ ಜತೆ ಮಾತನಾಡಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಭಾರತೀಯ ರಾಯಭಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ನಡೆದ ಭಾರತದ ಅನಧಿಕೃತ ದಾಳಿಗಳ ವಿರುದ್ಧ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಲಾಯಿತು.
ಭಾರತದ ಈ ದಾಳಿಯು ಪಾಕಿಸ್ತಾನದ ಸಾರ್ವಭೌಮತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ದುರಹಂಕಾರದ ವರ್ತನೆಯು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಬೆದರಿಕೆಯ ಉಂಟುಮಾಡುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.