ಸಾರಾಂಶ
ಕದನವಿರಾಮ ಮುಂದುವರಿಕೆಗೆ ಭಾರತ-ಪಾಕ್ ಸೇನಾಧಿಕಾರಿಗಳ ಸಭೆ ನಿರ್ಧರಿಸಿದ ಹಾಗೂ ಇನ್ನು ಭಾರತದ ತಂಟೆಗೆ ಬಾರದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ ಕೆಲವೇ ನಿಮಿಷದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.
ಶ್ರೀನಗರ: ಕದನವಿರಾಮ ಮುಂದುವರಿಕೆಗೆ ಭಾರತ-ಪಾಕ್ ಸೇನಾಧಿಕಾರಿಗಳ ಸಭೆ ನಿರ್ಧರಿಸಿದ ಹಾಗೂ ಇನ್ನು ಭಾರತದ ತಂಟೆಗೆ ಬಾರದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ ಕೆಲವೇ ನಿಮಿಷದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.
ಸೋಮವಾರ ರಾತ್ರಿ ಜಮ್ಮು-ಕಾಶ್ಮೀರದ ಸಾಂಬಾ ಮತ್ತು ಪಂಜಾಬ್‌ನ ಹೋಶಿಯಾರ್‌ಪುರ, ಜಲಂಧರ್‌ನಲ್ಲಿ ಪಾಕಿಸ್ತಾನ ಸೇನೆ ಸಣ್ಣ ಪ್ರಮಾಣದ ಡ್ರೋನ್ ದಾಳಿ ನಡೆಸಿದೆ. ಆದರೆ ಭಾರತದ ವಾಯುರಕ್ಷಣಾ ವ್ಯವಸ್ಥೆಗಳು ಈ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ.
ಹೋಶಿಯಾರ್‌ಪುರದ ದಾಸುಯಾ ಪ್ರದೇಶದಲ್ಲಿ ಕೆಲವು ಸ್ಫೋಟಗಳ ಶಬ್ದ ಕೇಳಿಬಂದಿದೆ. ಮತ್ತೊಂದೆಡೆ ಸಾಂಬಾ ಸೇರಿದಂತೆ ಪಠಾಣ್‌ಕೋಟ್, ವೈಷ್ಣೋದೇವಿ ಭವನ ಮತ್ತು ಯಾತ್ರಾ ಮಾರ್ಗದಲ್ಲಿ ಬ್ಲ್ಯಾಕೌಟ್ ಘೋಷಿಸಿ, ವಿದ್ಯುತ್ ಕಡಿತಗೊಳಿಸಲಾಗಿದೆ.
ನಾವು ಈಗಾಗಲೇ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯ ಸಾಧಿಸಿದ್ದು, ಅವರು ಈ ಪ್ರದೇಶದಲ್ಲಿ ಡ್ರೋನ್ ಪತ್ತೆ ಮಾಡಿದ್ದಾರೆ’ ಎಂದು ಹೋಶಿಯಾರ್‌ಪುರ ಉಪ ಆಯುಕ್ತೆ ಆಶಿಕಾ ತಿಳಿಸಿದ್ದಾರೆ.