ತಾನು ಪ್ರೀತಿಸಿದ ಯುವಕನ ಜೊತೆ ಮದುವೆಯಾಗಲು ಅಡ್ಡಿಆದ 13 ಜನರ ವಿಷ ಬೆರೆಸಿ ಕೊಂದ ಬಾಲಕಿ!

| Published : Oct 08 2024, 01:01 AM IST / Updated: Oct 08 2024, 04:58 AM IST

ಸಾರಾಂಶ

ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಮನೆಯವರು ವಿರೋಧಿಸಿದ್ದಕ್ಕೆ, ಪ್ರಿಯಕರನೊಂದಿಗೆ ಸೇರಿ ಕುಟುಂಬದ 13 ಜನರಿಗೆ ಊಟದಲ್ಲಿ ವಿಷ ಬೆರೆಸಿ ಕೊಂದ ಭೀಕರ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಶ್ರೀನಗರ: ತಾನು ಪ್ರೀತಿಸಿದ ಯುವಕನ ಜೊತೆ ಮದುವೆಯಾಗಲು ಮನೆಯವರು ವಿರೋಧಿಸಿ ಕಾರಣಕ್ಕೆ, ಬಾಲಕಿಯೊಬ್ಬಳು, ಪ್ರಿಯಕರನ ಜೊತೆ ಸೇರಿ ತನ್ನ ಕುಟುಂಬದ 13 ಜನರಿಗೆ ಊಟದಲ್ಲಿ ವಿಷ ಬೆರೆಸಿ ಕೊಂದ ಭೀಕರ ಘಟನೆ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ನಡೆದಿದೆ.

ಅ.19ರಂದು ಖೈರಾಪುರ್‌ನ ಹೈಬಾತ್‌ ಖಾನ್‌ ಬ್ರೋಹಿ ಗ್ರಾಮದಲ್ಲಿ ಈ ಘಃಟನೆ ನಡೆದಿದೆ. ಬಾಲಕಿ ತಾನು ಇಷ್ಟಪಟ್ಟವನನ್ನು ಮದುವೆಯಾಗಲು ಆಕೆಯ ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಇದಕ್ಕೆ ಕುಟುಂಬ ಸದಸ್ಯರ ಮೇಲೆ ಕೋಪಗೊಂಡ ಬಾಲಕಿ, ತನ್ನ ಮನೆಯವರನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ. ಪ್ರಿಯಕರನ ಜೊತೆ ತನ್ನ ಪೋಷಕರು ಸೇರಿದಂತೆ 13 ಜನರಿಗೆ ಊಟದಲ್ಲಿ ವಿಷ ಬೆರೆಸಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಊಟ ಸೇವಿಸಿದ ನಂತರ ಮನೆಯಲ್ಲಿದ್ದ 13 ಜನರು ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಕೂಡ ಬದುಕುಳಿಯಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ವಿಷಪೂರಿತ ಆಹಾರದಿಂದ ಸಾವನ್ನಪ್ಪಿರುವುದು ದೃಢವಾಗಿತ್ತು. ತನಿಖೆ ನಡೆಸಿದಾಗ ಬಾಲಕಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ರೊಟ್ಟಿ ಮಾಡಲು ಬಳಸುವ ಹಿಟ್ಟಿನಲ್ಲಿ ವಿಷ ಬೆರೆಸಿರುವುದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಬಾಲಕಿಯನ್ನು ಬಂಧಿಸಿದ್ದಾರೆ.