ಕುಟುಂಬ ಸಮೇತ ದೇವಿ ದರ್ಶನ ಪಡೆದ ಶಾಸಕ ಸ್ವರೂಪ್
Oct 14 2025, 01:00 AM ISTಶಾಸಕ ಎಚ್.ಪಿ. ಸ್ವರೂಪ್ ಸೋಮವಾರ ಕುಟುಂಬ ಸಮೇತ ಹಾಸನಾಂಬೆ ದೇವಿಯ ದರ್ಶನ ಪಡೆದರು. ಜಿಲ್ಲಾಡಳಿತ ನಿಗದಿಪಡಿಸಿದ ಪ್ರೋಟೋಕಾಲ್ ವಾಹನದಲ್ಲೇ ಅವರು ದೇವಾಲಯಕ್ಕೆ ಆಗಮಿಸಿದ್ದು, ನಿಯಮಾನುಸಾರ ದೇವಿಯ ದರ್ಶನ ಪಡೆದು ಭಕ್ತಿಯ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಭಕ್ತರ ಸುಗಮ ಧರ್ಮದರ್ಶನಕ್ಕಾಗಿ ಗೋಲ್ಡ್ ಕಾರ್ಡ್ ವ್ಯವಸ್ಥೆ, ಭದ್ರತಾ ಕ್ರಮಗಳು, ಕುಡಿಯುವ ನೀರು, ವೈದ್ಯಕೀಯ ಸಹಾಯ ಸೇರಿದಂತೆ ಎಲ್ಲ ವ್ಯವಸ್ಥೆಗಳು ಶಿಸ್ತುಬದ್ಧವಾಗಿ ನಡೆದಿವೆ ಎಂದರು.