ಭಾರತೀಯ ಅಥ್ಲೀಟ್‌ಗಳು ಇನ್ನು ಡಿಜಿಲಾಕರ್‌ ಬಳಸುವುದು ಕಡ್ಡಾಯ

| N/A | Published : Apr 25 2025, 12:33 AM IST / Updated: Apr 25 2025, 06:09 AM IST

ಸಾರಾಂಶ

ಕ್ರೀಡಾಪಟುಗಳ ಪ್ರಮಾಣ ಪತ್ರ, ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಕ್ರೀಡಾ ಸಚಿವಾಲಯವು, ಭಾರತೀಯ ಕ್ರೀಡಾಪಟುಗಳಿಗೆ ಡಿಜಿಲಾಕರ್‌ ಬಳಸುವುದನ್ನು ಕಡ್ಡಾಯಗೊಳಿಸಿದೆ.

  ನವದೆಹಲಿ: ಕ್ರೀಡಾಪಟುಗಳ ಪ್ರಮಾಣ ಪತ್ರ, ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಕ್ರೀಡಾ ಸಚಿವಾಲಯವು, ಭಾರತೀಯ ಕ್ರೀಡಾಪಟುಗಳಿಗೆ ಡಿಜಿಲಾಕರ್‌ ಬಳಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವರ್ಷದ ಒಳಗೆ ದೇಶದ ಎಲ್ಲಾ ಕ್ರೀಡಾಪಟುಗಳು ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ (ಎನ್‌ಎಸ್‌ಎಫ್‌)ಗಳಿಗೆ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಸೂಚಿಸಿದ್ದಾರೆ.

ಇಲ್ಲಿ ಗುರುವಾರ, 40ಕ್ಕೂ ಹೆಚ್ಚು ಎನ್‌ಎಸ್‌ಎಫ್‌ಗಳು ಹಾಗೂ ಒಲಿಂಪಿಕ್‌ ಪದಕ ವಿಜೇತ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು, ಹಾಕಿಪಟು ಜರ್ಮನ್‌ಪ್ರೀತ್‌ ಸಿಂಗ್‌ ಸೇರಿ ಇನ್ನೂ ಕೆಲ ಕ್ರೀಡಾಪಟುಗಳು ಸಮ್ಮುಖದಲ್ಲಿ ಡಿಜಿಟಲೀಕರಣದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗುಂಪುಗಾರಿಕೆ, ಸ್ವಜನಪಕ್ಷಪಾತಕ್ಕೆ

ಅವಕಾಶ ನೀಡುವುದಿಲ್ಲ: ಸಚಿವ

2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಅವಕಾಶ ಪಡೆಯುವ ನಿಟ್ಟಿನಲ್ಲಿ ಭಾರತದ ಎಲ್ಲಾ ಕ್ರೀಡಾಪಟುಗಳು ಸ್ಪರ್ಧಿಸಬೇಕು. ಕೆಲ ಕ್ರೀಡಾಪಟುಗಳಿಂದ ಗುಂಪುಗಾರಿಕೆ ಹಾಗೂ ಸ್ವಜನಪಕ್ಷಪಾತದಿಂದಾಗಿ ಉಳಿದವರೂ ಸಮಸ್ಯೆ ಎದುರಿಸುವಂತಾಗಿದೆ. ಇದನ್ನು ಕ್ರೀಡಾ ಸಚಿವಾಲಯ ಸಹಿಸುವುದಿಲ್ಲ. ಇಂತಹ ನಡೆಗೆ ತಡೆ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಸಚಿವ ಮನ್‌ಸುಖ್‌ ಹೇಳಿದರು.