ಸಂಸತ್‌ ದಾಳಿಯ ಕಿಂಗ್‌ಪಿನ್‌ ಮೈಸೂರಿನ ಮನೋರಂಜನ್‌!

| Published : Jan 14 2024, 01:30 AM IST / Updated: Jan 14 2024, 11:30 AM IST

Parliment and Manoranjan
ಸಂಸತ್‌ ದಾಳಿಯ ಕಿಂಗ್‌ಪಿನ್‌ ಮೈಸೂರಿನ ಮನೋರಂಜನ್‌!
Share this Article
  • FB
  • TW
  • Linkdin
  • Email

ಸಾರಾಂಶ

ಡಿ.13ರಂದು ಸಂಸತ್ ಭವನದ ಒಳಗೆ ‘ಹೊಗೆ ಬಾಂಬ್‌’ ಸಿಡಿಸಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ, ಇಡೀ ಕೃತ್ಯದ ಮಾಸ್ಟರ್‌ಮೈಂಡ್‌ ಮೈಸೂರು ಮೂಲದ ಮನೋರಂಜನ್‌ ಎಂಬುದು ದೃಢಪಟ್ಟಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನವದೆಹಲಿ: ಡಿ.13ರಂದು ಸಂಸತ್ ಭವನದ ಒಳಗೆ ‘ಹೊಗೆ ಬಾಂಬ್‌’ ಸಿಡಿಸಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ, ಇಡೀ ಕೃತ್ಯದ ಮಾಸ್ಟರ್‌ಮೈಂಡ್‌ ಮೈಸೂರು ಮೂಲದ ಮನೋರಂಜನ್‌ ಎಂಬುದು ದೃಢಪಟ್ಟಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶುಕ್ರವಾರ ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಮಂಪರು ಪರೀಕ್ಷೆಯಲ್ಲಿ ಮನೋರಂಜನ್‌ ಹಾಗೂ ಸಾಗರ್‌ ಶರ್ಮಗೆ ವಿಶೇಷ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ವೇಳೆ ಸತ್ಯ ಹೊರಬಂದಿದೆ.

ಈ ಹಿಂದೆ ಸಂಸತ್‌ ಸ್ಫೋಟದ ರೂವಾರಿ ಬಂಗಾಳ ಮೂಲದ ಲಲಿತ್‌ ಝಾ ಎಂದು ಹೇಳಲಾಗಿತ್ತು. ಆದರೆ ಬ್ರೇನ್‌ ಮ್ಯಾಪಿಂಗ್‌ ಪರೀಕ್ಷೆ, ನಾರ್ಕೋ ಟೆಸ್ಟ್‌ ಹಾಗೂ ಪಾಲಿಗ್ರಾಫಿ ಪರೀಕ್ಷೆಗಳಲ್ಲಿ ಮನೋರಂಜನ್ ಮಾಸ್ಟರ್‌ಮೈಂಡ್‌ ಎಂಬುದು ಗೊತ್ತಾಗಿದೆ.