ರೈಲು ನಿಲ್ದಾಣದಲ್ಲಿ ರೈಲಿನ ಹೆಸರಿನಿಂದ ಗೊಂದಲದಿಂದ ಕಾಲ್ತುಳಿತ : ಪೊಲೀಸ್‌ ವರದಿ

| N/A | Published : Feb 17 2025, 12:35 AM IST / Updated: Feb 17 2025, 05:33 AM IST

ಸಾರಾಂಶ

ಶನಿವಾರ ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತಕ್ಕೆ ರೈಲಿನ ಹೆಸರಿನಿಂದ ಉಂಟಾದ ಗೊಂದಲ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ.

ನವದೆಹಲಿ: ಶನಿವಾರ ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತಕ್ಕೆ ರೈಲಿನ ಹೆಸರಿನಿಂದ ಉಂಟಾದ ಗೊಂದಲ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ. ‘ಪ್ರಯಾಗರಾಜ್‌ ಎಕ್ಸ್‌ಪ್ರೆಸ್‌’ ಹಾಗೂ ‘ಪ್ರಯಾಗರಾಜ್‌ ಸ್ಪೆಷಲ್‌’ ರೈಲುಗಳ ಹೆಸರಿನಿಂದಾಗಿ ಗೊಂದಲ ಸೃಷಿಯಾಗಿತ್ತು ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಆಗಿದ್ದೇನು?:

ಪ್ರಯಾಗ್‌ರಾಜ್‌ಗೆ ತೆರಳುವ ಪ್ರಯಾಗ್‌ರಾಜ್‌ ಎಕ್ಸ್‌ಪ್ರೆಸ್‌ ರೈಲು ಫ್ಲ್ಯಾಟ್‌ಫಾರ್ಮ್‌ 14ಕ್ಕೆ ಬರಬೇಕಿತ್ತು. ಅದಕ್ಕಾಗಿ ಜನತೆ ಕಾದು ನಿಂತಿದ್ದರು. ಅಷ್ಟರಲ್ಲೇ ಪ್ರಯಾಗ್‌ರಾಜ್‌ಗೆ ತೆರಳುವ ಪ್ರಯಾಗ್‌ರಾಜ್‌ ಸ್ಪೆಷಲ್‌ ರೈಲು ಫ್ಲ್ಯಾಟ್‌ಫಾರ್ಮ್‌ 16ಕ್ಕೆ ಬರಲಿದೆ ಎಂದು ರೈಲ್ವೆ ಸಿಬ್ಬಂದಿ ಮಾಹಿತಿ ನೀಡಿದ್ದರು.

ಇದನ್ನು ಸರಿಯಾಗಿ ಕೇಳಿಸಿಕೊಳ್ಳದ ಫ್ಲ್ಯಾಟ್‌ಫಾರ್ಮ್‌ 14ರಲ್ಲಿದ್ದ ಸಾವಿರಾರು ಜನರು ಏಕಾಏಕಿ ಫ್ಲ್ಯಾಟ್‌ಫಾರ್ಮ್‌ 16ರ ಧಾವಿಸಿಸಿದ್ದಾರೆ. ಈ ವೇಳೆ ಮೆಟ್ಟಿಲಲ್ಲಿ ಕೆಲವರು ಉರುಳಿಬಿದ್ದಿದ್ದಾರೆ. ಈ ವೇಳೆ ಅವರ ಮೇಲೆ ಇನ್ನಷ್ಟು ಜನರು ಉರುಳಿ ಬಿದ್ದು 18 ಜನರು ಸಾವನ್ನಪ್ಪಿದ್ದಾರೆ.