ಸಾರಾಂಶ
ಅಕ್ರಮ ಹಣ ವರ್ಗಾವಣೆ ಮಾಡಿದ ಕಾರಣಕ್ಕಾಗಿ ಭಾರತೀಯ ಹಣಕಾಸು ಗುಪ್ತಚರ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5 ಕೋಟಿ ರು. ದಂಡ ವಿಧಿಸಿದೆ.
ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹಣಕಾಸು ಗುಪ್ತಚರ ಸಂಸ್ಥೆ (ಎಫ್‌ಐಯು) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ರು. ದಂಡ ವಿಧಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕಾನೂನೇತರ ಹಣಕಾಸು ಮಾರ್ಗಗಳನ್ನು ನಡೆಸಿದೆ.ಆನ್ಲೈನ್ ಜೂಜುಗಳಿಗೆ ಪ್ರೋತ್ಸಾಹ ನೀಡಿ, ಅದರಿಂದ ಬಂದ ಹಣವನ್ನು ತನ್ನ ಖಾತೆಗಳಿಗೆ ವರ್ಗಾವಣೆ ಮಾಡಿದೆ ಎಂಬ ತನಿಖಾ ಸಂಸ್ಥೆಗಳ ಮಾಹಿತಿಯನ್ನು ಎಫ್‌ಐಯು ಪರಿಶೀಲನೆ ನಡೆಸಿದೆ.
ಬಳಿಕ ಪೇಟಿಎಂ ನಡೆಸಿರುವುದು ಕ್ರಿಮಿನಲ್ ಪ್ರಕರಣವಾಗಿರುವ ಕಾರಣ ಅದಕ್ಕೆ 5.49 ಕೋಟಿ ರು. ದಂಡ ಕಟ್ಟುವಂತೆ ಆದೇಶಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಿನ ತನ್ನ ಆದೇಶದಲ್ಲಿ ಫೆ.29ರ ಬಳಿಕ ಯಾವುದೇ ಹೊಸ ಪಾವತಿಗಳನ್ನು ಸ್ವೀಕರಿಸಬಾರದು ಎಂದು ಆದೇಶಿಸಿತ್ತು.