ಸಾರಾಂಶ
ಬೇರೆ ಬ್ಯಾಂಕಿಂದ ಫಾಸ್ಟ್ಯಾಗ್ ಪಡೆಯಲು ಸೂಚನೆ ನೀಡಲಾಗಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮಾ.15ಕ್ಕೆ ತನ್ನ ಸೇವೆಯನ್ನು ನಿಲ್ಲಿಸಲಿದೆ.
ನವದೆಹಲಿ: ಅಕ್ರಮ ಎಸಗಿದ್ದಕ್ಕಾಗಿ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಹಲವು ಸೇವೆಗಳಿಗೆ ಆರ್‌ಬಿಐ ಹೇರಿರುವ ನಿರ್ಬಂಧಮಾ.15ರಿಂದ ಜಾರಿಯಾಗಲಿದೆ.
ಹೀಗಾಘಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೇಟಿಎಂ ಪೇಮೆಂಟ್ ಬ್ಯಾಂಕ್ ಫಾಸ್ಟ್ಯಾಗ್ ಗ್ರಾಹಕರಿಗೆ ಮಾ. 15 ರೊಳಗೆ ಬೇರೆ ಬ್ಯಾಂಕ್‌ನಿಂದ ಹೊಸ ಫಾಸ್ಟ್ಯಾಗ್ ಪಡೆದುಕೊಳ್ಳುವಂತೆ ಹೇಳಿದೆ. ಪೇಟಿಎಂ ಬ್ಯಾಂಕ್ ಫಾಸ್ಟ್ಯಾಗ್ ಬಳಕೆದಾರರಿಗೆ ಮಾ. 15ರ ನಂತರ ರೀಚಾರ್ಜ್ ಮಾಡುವ ಆಯ್ಕೆ ಇರುವುದಿಲ್ಲ. ಹೀಗಾಗಿ ಈ ಸೂಚನೆ ನೀಡಿದೆ.ಆದರೂ ನಿಗದಿತ ದಿನಾಂಕ ಮೀರಿ ಟೋಲ್‌ಗಳಲ್ಲಿ ಪಾವತಿಸಲು ಅಸ್ತಿತ್ವದಲ್ಲಿರುವ ಬಾಕಿ ಮೊತ್ತ ಬಳಸುವುದನ್ನು ಮುಂದುವರಿಸಬಹುದು ಎಂದು ಎನ್‌ಎಚ್ಎಐ ತಿಳಿಸಿದೆ.