ಕಾಶ್ಮೀರ: ಮೊದಲ ಅಧಿವೇಶದಲ್ಲಿ ‘370 ಕೋಲಾಹಲ’

| Published : Nov 05 2024, 12:47 AM IST

ಸಾರಾಂಶ

ಹೊಸದಾಗಿ ರಚಿತವಾದ ಹಾಗೂ 6 ವರ್ಷ ಬಳಿಕ ಮೊದಲ ಬಾರಿ ಸಮಾವೇಶಗೊಂಡ ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಸೋಮವಾರ 370ನೇ ವಿಧಿ ಕೋಲಾಹಲ ಎಬ್ಬಿಸಿದೆ.

ಶ್ರೀನಗರ: ಹೊಸದಾಗಿ ರಚಿತವಾದ ಹಾಗೂ 6 ವರ್ಷ ಬಳಿಕ ಮೊದಲ ಬಾರಿ ಸಮಾವೇಶಗೊಂಡ ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಸೋಮವಾರ 370ನೇ ವಿಧಿ ಕೋಲಾಹಲ ಎಬ್ಬಿಸಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ರದ್ದಾಗಿರುವ ಈ ವಿಧಿ ಮರುಸ್ಥಾಪನೆಗೆ ಪಿಡಿಪಿ ಶಾಸಕ ವಾಹಿದ್ ಪರ್ರಾ ಅಚ್ಚರಿಯ ರೀತಿ ನಿರ್ಣಯ ಮಂಡಿಸಿದ್ದೇ ಇದಕ್ಕೆ ಕಾರಣ.

ಈ ಗೊತ್ತುವಳಿಯನ್ನು ಬಿಜೆಪಿ ಶಾಸಕರು ವಿರೋಧಿಸಿ, ಪರ್ರಾ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಹೀಮ್ ರಾಥರ್ ಈ ಗೊತ್ತುವಳಿಯನ್ನು ಚರ್ಚೆಗೆ ಅಂಗೀಕರಿಸಿಲ್ಲ ಎಂದರು.ಬಳಿಕ ಮಾತನಾಡಿದ ಸಿಎಂ ಒಮರ್‌ ಅಬ್ದುಲ್ಲಾ, ‘370ನೇ ವಿಧಿ ರದ್ದತಿಯನ್ನು ಜನ ಒಪ್ಪಿಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ತಿಳಿದುಬಂದಿದೆ. ಆದರೆ ಪಿಡಿಪಿ ಮಂಡಿಸಿದ ಗೊತ್ತುವಳಿಗೆ ಅರ್ಥವಿಲ್ಲ. ಆ ಪಕ್ಷ ಕೇವಲ ಪ್ರಚಾರಕ್ಕೋಸ್ಕರ ನಿರ್ಣಯ ಮಂಡಿಸಿದೆ. ಮಂಡಿಸುವ ಉದ್ದೇಶ ಇದ್ದರೆ ನಮ್ಮ ಜತೆ ಚರ್ಚಿಸಬೇಕಿತ್ತು’ ಎಂದರು.ಇತ್ತೀಚೆಗೆ ಅಬ್ದುಲ್ಲಾ ಅವರು ಈ ವಿಧಿಯನ್ನು ಕೇಂದ್ರ ಸರ್ಕಾರ ಮರುಸ್ಥಾಪಿಸುವ ಭರವಸೆ ಇಲ್ಲ ಎಂದಿದ್ದರು.