ಸಾರಾಂಶ
ಪೆರು ದೇಶ ತನ್ನ ನಾಗರಿಕ ಮಾರ್ಸೆಲಿನೋ ಅಬಾದ್ ಇತ್ತೀಚೆಗೆ 124ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅವರೇ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಘೋಷಿಸಿದೆ
ನವದೆಹಲಿ: ಬ್ರಿಟನ್‌ನ 111 ವರ್ಷದ ಜಾನ್ ಆಲ್ಪ್ರೆಡ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಇತ್ತೀಚೆಗೆ ಗಿನ್ನೆಸ್ ವಿಶ್ವದಾಖಲೆ ಪುಸ್ತಕದ ಅಧಿಕಾರಿಗಳು ಘೋಷಿಸಿದ್ದರು.
ಆದರೆ ಪೆರು ದೇಶ ತನ್ನ ನಾಗರಿಕ ಮಾರ್ಸೆಲಿನೋ ಅಬಾದ್ ಇತ್ತೀಚೆಗೆ 124ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅವರೇ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಘೋಷಿಸಿದೆ.
ಮಧ್ಯ ಪೆರುವಿಯನ್ ಪ್ರದೇಶದ ನಿವಾಸಿ ಮಾರ್ಸೆಲಿನೊ ಅಬಾದ್ ಎಂಬುವವರು ತಮ್ಮ 124ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅವರನ್ನು ಪೆರು ಸರ್ಕಾರ ಗುರುತಿಸಿ ಪಿಂಚಣಿ ಹಾಗೂ ಗುರುತು ಪತ್ರವನ್ನು ನೀಡಿದೆ.