ಬಿಹಾರ: 65.2 ಲಕ್ಷ ಅನರ್ಹ ಮತದಾರರು ಪತ್ತೆ

| N/A | Published : Jul 26 2025, 02:00 AM IST / Updated: Jul 26 2025, 04:11 AM IST

ಸಾರಾಂಶ

ಬಿಹಾರದ ಅನರ್ಹ ಮತದಾರರ ಪತ್ತೆಗೆ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ ಮೊದಲ ಹಂತ ಮುಕ್ತಾಯವಾಗಿದ್ದು, 65.2 ಲಕ್ಷ ಮತದಾರರನ್ನು ಅನಹ ಎಂದು ಗುರುತಿಸಲಾಗಿದೆ. ಇವರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ.

 ನವದಹಲಿ: ಬಿಹಾರದ ಅನರ್ಹ ಮತದಾರರ ಪತ್ತೆಗೆ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ ಮೊದಲ ಹಂತ ಮುಕ್ತಾಯವಾಗಿದ್ದು, 65.2 ಲಕ್ಷ ಮತದಾರರನ್ನು ಅನಹ ಎಂದು ಗುರುತಿಸಲಾಗಿದೆ. ಇವರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ.

ಮತದಾರರ ಲೆಕ್ಕಾಚಾರ ಅರ್ಜಿ ಸಲ್ಲಿಕೆಗೆ ಶುಕ್ರವಾರ ಕೊನೆ ದಿನವಾಗಿದ್ದು, ಪ್ರಕ್ರಿಯೆ ಮುಕ್ತಾಯದ ನಂತರ ಆಯೋಗವು ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.

ಇದರ ಪ್ರಕಾರ, 22 ಲಕ್ಷ ಜನ ಮೃತಪಟ್ಟಿದ್ದು, 35 ಲಕ್ಷ ಜನ ಶಾಶ್ವತವಾಗಿ ಬಿಹಾರ ತೊರೆದು ಬೇರೆಡೆ ನೆಲೆಸಿದ್ದಾರೆ. 7 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿದ್ದರು. 1.2 ಲಕ್ಷ ಜನ ಇನ್ನೂ ಫಾರಂಗಳನ್ನು ಮರಳಿಸಿಲ್ಲ. ಹೀಗೆ ಒಟ್ಟು 65.2 ಲಕ್ಷ ಹೆಸರುಗಳು ಮತದಾರರನ್ನು ಅರ್ಹ ಎಂದು ಗುರುತಿಸಲಾಗಿದೆ. ಶೀಘ್ರ ಇವರನ್ನು ಕೈಬಿಡುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.ಈಗಾಗಲೇ ಶೇ.99.8ರಷ್ಟು ಜನರು ಪರಿಶೀಲನೆಗೆ ಒಳಪಟ್ಟಿದ್ದಾರೆ. ಮತದಾರರ ಪಟ್ಟಿಗೆ ಇನ್ನೂ ಸೇರ್ಪಡೆಯಾಗದವರು, ಆ.1ರಿಂದ ಸೆ.1ರ ವರೆಗೆ ನಡೆಯುವ 2ನೇ ಹಂತದ ಪರಿಷ್ಕರಣೆ ವೇಳೆ ನೋಂದಣಿ ಮಾಡಿಕೊಳ್ಳಬಹುದು ಎಂದು ಆಯೋಗ ಸೂಚಿಸಿದೆ.

Read more Articles on