ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ, ಬಳಿಕ ಕ್ಷಮೆ ಯಾಚಿಸಿದ್ದ ನೋಯ್ಡಾದ 15ರ ಬಾಲಕಿ ರುಚಿರಾಳನ್ನು ದತ್ತು ತೆಗೆದುಕೊಳ್ಳುವಂತೆ ಆಕೆಯ ತಾಯಿ ಮೋದಿ ಬಳಿ ಮನವಿ ಮಾಡಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ, ಬಳಿಕ ಕ್ಷಮೆ ಯಾಚಿಸಿದ್ದ ನೋಯ್ಡಾದ 15ರ ಬಾಲಕಿ ರುಚಿರಾಳನ್ನು ದತ್ತು ತೆಗೆದುಕೊಳ್ಳುವಂತೆ ಆಕೆಯ ತಾಯಿ ಮೋದಿ ಬಳಿ ಮನವಿ ಮಾಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಬಾಲಕಿಯ ತಾಯಿ
ಪತ್ರಕರ್ತರೊಂದಿಗೆ ಮಾತನಾಡಿದ ಬಾಲಕಿಯ ತಾಯಿ, ‘ಪ್ರಧಾನಿ ಮೋದಿ ನಮ್ಮ ಮಗಳಿಗೆ ಮರುಜೀವ ನೀಡಿದ್ದಾರೆ. ಹೀಗಾಗಿ ತಂದೆಯನ್ನು ಕಳೆದುಕೊಂಡ ಆಕೆಯನ್ನು ಸ್ವತಃ ಮೋದಿಯೇ ದತ್ತು ಪಡೆಯಬೇಕು ಎಂದು ನಾನು ಮನವಿ ಮಾಡುತ್ತೇನೆ’ ಎಂದಿದ್ದಾರೆ.
ನೆಮ್ಮದಿಯಿಂದ ಮನೆಯಲ್ಲೇ ಇರಲಾಗುತ್ತಿಲ್ಲ
ಇದೇ ವೇಳೆ, ‘ದೆಹಲಿ ಘಟನೆ ಬಳಿಕ ನಮಗೆ ನೆಮ್ಮದಿಯಿಂದ ಮನೆಯಲ್ಲೇ ಇರಲಾಗುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಾಚಾರದ ಬೆದರಿಕೆ ಒಡ್ಡಲಾಗುತ್ತಿದೆ. ಅಧಿಕಾರಿಗಳು ನಮಗೆ ಭದ್ರತೆ ಒದಗಿಸಬೇಕು ಹಾಗೂ ರುಚಿಕಾಳ ವಿರುದ್ಧದ ಎಫ್‌ಐಆರ್ ರದ್ದು ಮಾಡಬೇಕು. ನಾಳೆ ನಮಗೇನಾದರೂ ಅಪಾಯವಾದರೆ ಅದಕ್ಕೆ ಮೋದಿಯವರನ್ನು ನಿಂದಿಸಬೇಡಿ. ಅವರು ಈ ರಾಷ್ಟ್ರದ ರಾಜ. ಹುಟ್ಟಿದ ದಿನದಂದು ಮಗಳನ್ನು ಕ್ಷಮಿಸುವ ಮೂಲಕ ಬಹುದೊಡ್ಡ ಉಡುಗೊರೆ ನೀಡಿದ್ದಾರೆ. ಆಕೆಗೆ ಜೀವದಾನ ಸಿಕ್ಕಿದೆ’ ಎಂದು ಹೇಳಿದ್ದಾರೆ.
ಜೊತೆಗೆ ‘10ರಿಂದ 20 ವರ್ಷದ ಮಕ್ಕಳು ಸುಲಭವಾಗಿ ಪ್ರಭಾವಿತರಾಗುತ್ತಾರೆ ಹಾಗೂ ಅವರು ಸುಲಭವಾಗಿ ಶೋಷಣೆಗೆ ಒಳಗಾಗುತ್ತಾರೆ. ಮಕ್ಕಳ ಇನ್‌ಸ್ಟಾಗ್ರಾಂ ಹಾಗೂ ಫೇಸ್ಬುಕ್ ಬಳಕೆಯನ್ನು ನಿಷೇಧಿಸಬೇಕು. 18 ವರ್ಷಕ್ಕಿಂತ ಕೆಳಗಿನವರು ಪ್ರತಿಭಟನೆಗಳಲ್ಲಿ ಭಾಗಿಯಾಗದಂತೆ ತಡೆಯಬೇಕು’ ಎಂದು ರುಚಿಕಾಳ ತಾಯಿ ಸೂಚಿಸಿದ್ದಾರೆ.

