ಅಕ್ಟೋಬರ್ 22 ಮತ್ತು 23 ರಂದು ರಷ್ಯಾದಲ್ಲಿ ಬ್ರಿಕ್ಸ್ ಶೃಂಗಸಭೆ :ಪ್ರಧಾನಿ ನರೇಂದ್ರ ಮೋದಿ ಭಾಗಿ

| Published : Oct 22 2024, 12:00 AM IST / Updated: Oct 22 2024, 05:18 AM IST

Narendra Modi rally in Sonipat

ಸಾರಾಂಶ

ಅಕ್ಟೋಬರ್ 22 ಮತ್ತು 23 ರಂದು ರಷ್ಯಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ನವದೆಹಲಿ: ಅಕ್ಟೋಬರ್ 22 ಮತ್ತು 23 ರಂದು ರಷ್ಯಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧ ಹಾಗೂ ಇಸ್ರೇಲ್‌-ಹಮಾಸ್‌-ಹಿಜ್ಬುಲ್ಲಾ ಯುದ್ಧದ ವೇಳೆಯೇ ಶೃಂಗ ನಡೆಯಲಿರುವ ಕಾರಣ ಯುದ್ಧ ತಣಿಸುವ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದ. ಅಫ್ರಿಕ ದೇಶಗಳ ಒಕ್ಕೂಟವೇ ‘ಬ್ರಿಕ್ಸ್’ ಆಗಿದೆ. ಇದರ ಜತೆಗೆ ಈಜಿಪ್ಟ್‌, ಇಥಿಯೋಪಿಯಾ, ಇರಾನ್‌, ಸೌದಿ ಅರೇಬಿಯಾ ಹಾಗೂ ಯುಎಇ ಕೂಡ ಸೇರಿಕೊಂಡಿದ್ದು, ಆ ದೇಶಗಳೂ ಭಾಗಿ ಆಗಲಿವೆ.

ಶೃಂಗಸಭೆಯಲ್ಲಿ ‘ಆರ್ಥಿಕ ಅಭಿವೃದ್ಧಿ, ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಹವಾಮಾನ ಬದಲಾವಣೆ ಬಗ್ಗೆ ಚರ್ಚೆ ನಡೆಯಲಿವೆ’ ಎಂದು ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ವಿನಯ್ ಕುಮಾರ್ ಹೇಳಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಶೃಂಗಕ್ಕೆ ಬರಲಿದ್ದು, ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಬಹುದು ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.