ಸಾರಾಂಶ
ಗುವಾಹಟಿ: ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಮನೆಗಳ ವಿದ್ಯುತ್ ಬಿಲ್ಅ ನ್ನು ಶೂನ್ಯ ಮಾಡುವತ್ತ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಸ್ಸಾಂನಲ್ಲಿ 11,600 ಕೋಟಿ ರು.ಗಳ ವಿವಿಧ ಯೋಜನೆಗಳನ್ನು ಅನಾವರಣಗೊಳಿಸಿದ ನಂತರ ಗುವಾಹಟಿಯಲ್ಲಿ ಬೃಹತ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಕಳೆದ 10 ವರ್ಷಗಳಲ್ಲಿ ಪ್ರತಿ ಮನೆಗೆ ವಿದ್ಯುತ್ ನೀಡುವ ಅಭಿಯಾನ ನಡೆಸಿದ್ದೇವೆ.
ಈಗ ವಿದ್ಯುತ್ ಬಿಲ್ ಶೂನ್ಯ ಮಾಡುವತ್ತ ಸಾಗುತ್ತಿದ್ದೇವೆ. ಇತ್ತೀಚಿನ ಬಜೆಟ್‌ನಲ್ಲಿ ಸರ್ಕಾರ ಬೃಹತ್ ಮೇಲ್ಛಾವಣಿ ಸೋಲಾರ್ ಯೋಜನೆಯನ್ನು ಘೋಷಿಸಿದೆ.
ಈ ಯೋಜನೆಯಡಿ ಆರಂಭದಲ್ಲಿ, 1 ಕೋಟಿ ಕುಟುಂಬಗಳಿಗೆ ಮೇಲ್ಛಾವಣಿ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರ ಸಹಾಯ ಮಾಡಲಿದೆ’ ಎಂದರು.
‘ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಪ್ರತಿ ಫಲಾನುಭವಿಯನ್ನು ತಲುಪಲು ಬದ್ಧವಾಗಿದೆ. ಪ್ರತಿ ನಾಗರಿಕನ ಜೀವನ ಆರಾಮದಾಯಕವಾಗಿಸುವುದು ನಮ್ಮ ಗುರಿ.
ಈ ಗಮನವು ನಮ್ಮ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. ಬಜೆಟ್‌ನಲ್ಲಿ ಮೂಲಸೌ ಕರ್ಯಕ್ಕಾಗಿ 11 ಲಕ್ಷ ಕೋಟಿ ರು.ಗಳನ್ನು ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ’ ಎಂದರು.