ಹರಿಮಂದಿರ್‌ ತಖ್ತ್‌ಗೆ ಭೇಟಿ ನೀಡಿ ಅಡುಗೆ ಮಾಡಿ ಬಡಿಸಿದ ಮೋದಿ

| Published : May 14 2024, 01:11 AM IST / Updated: May 14 2024, 04:42 AM IST

ಹರಿಮಂದಿರ್‌ ತಖ್ತ್‌ಗೆ ಭೇಟಿ ನೀಡಿ ಅಡುಗೆ ಮಾಡಿ ಬಡಿಸಿದ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಗುರು ಗೋವಿಂದ ಸಿಂಗ್‌ ಅವರ ಜನ್ಮಸ್ಥಳವಾಗಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಮಂತ್ರಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ.

ಪಟನಾ: ಸಿಖ್ಖರ 10ನೇ ಧರ್ಮಗುರು ಗುರು ಗೋವಿಂದ ಸಿಂಗ್‌ ಅವರ ಜನ್ಮಸ್ಥಳವಾಗಿರುವ ಶ್ರೀ ಹರಿಮಂದಿರ್‌ ಜಿ ಪಟನಾ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಲಂಗರ್‌(ಅಡುಗೆ) ಸೇವೆ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಮಾಜಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ‘ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಪಟನಾದಲ್ಲಿರುವ ಹರಿಮಂದಿರ್‌ ಗುರುದ್ವಾರಕ್ಕೆ ಭೇಟಿ ನೀಡಿರುವುದು ನಮಗೆ ಸಂತಸ ಉಂಟು ಮಾಡಿದೆ. ನರೇಂದ್ರ ಮೋದಿ ಕೇವಲ ಭೇಟಿ ನೀಡುವುದಷ್ಟೇ ಅಲ್ಲದೆ ಸಾಮುದಾಯಿಕ ಅಡುಗೆ ಮನೆಯಲ್ಲಿ ರೊಟ್ಟಿಯನ್ನು ಬೇಯಿಸಿ ಅದನ್ನು ಭಕ್ತಾದಿಗಳಿಗೆ ಉಣಬಡಿಸಿದ್ದಾರೆ’ ಎಂದು ತಿಳಿಸಿದರು.

ಪಟನಾ ಸಾಹಿಬ್ ಕ್ಷೇತ್ರದಿಂದ ರವಿಶಂಕರ್‌ ಪ್ರಸಾದ್‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಜೂ.1ರಂದು ಮತದಾನ ನಡೆಯಲಿದೆ.

ಪಟನಾ ನಗರದಲ್ಲಿರುವ ತಖ್ತ್‌ ಶ್ರೀ ಹರಿಮಂದಿರ್‌ಜಿ ಪಟನಾ ಸಾಹಿಬ್ ಗುರುದ್ವಾರವನ್ನು 18ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ರಣಜಿತ್‌ ಸಿಂಗ್‌ ಇದರ ನಿರ್ಮಾತೃವಾಗಿದ್ದಾನೆ.