ತನಗಾಗಿ 14 ವರ್ಷ ಚಪ್ಪಲಿ ಬಿಟ್ಟಿದ್ದ ಅಭಿಮಾನಿಗೆ ಶೂ ಕೊಟ್ಟ ಪ್ರಧಾನಿ ನರೇಂದ್ರ ಮೋದಿ !

| N/A | Published : Apr 15 2025, 12:48 AM IST / Updated: Apr 15 2025, 05:00 AM IST

ಸಾರಾಂಶ

ನರೇಂದ್ರ ಮೋದಿ ಪ್ರಧಾನಿ ಆಗುವವರೆಗೂ ತಾನು ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆ ಮಾಡಿ ಅದರಂತೆ 14 ವರ್ಷಗಳಿಂದ ಬರಿಗಾಗಲಲ್ಲೇ ನಡೆದಾಡುತ್ತಿದ್ದ ಅಭಿಮಾನಿಯೊಬ್ಬರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಭೇಟಿ ಮಾಡಿದರು.

ಯಮುನಾನಗರ: ನರೇಂದ್ರ ಮೋದಿ ಪ್ರಧಾನಿ ಆಗುವವರೆಗೂ ತಾನು ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆ ಮಾಡಿ ಅದರಂತೆ 14 ವರ್ಷಗಳಿಂದ ಬರಿಗಾಗಲಲ್ಲೇ ನಡೆದಾಡುತ್ತಿದ್ದ ಅಭಿಮಾನಿಯೊಬ್ಬರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಭೇಟಿ ಮಾಡಿದರು. ಜೊತೆಗೆ ಆತನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ್ದೂ ಅಲ್ಲದೆ ಆತನಿಗೆ ಒಂದು ಜೊತೆ ಶೂ ಉಡುಗೊರೆ ನೀಡುವ ಮೂಲಕ ಮುಂದೆ ಇಂಥ ಪ್ರತಿಜ್ಞೆ ಮಾಡದಂತೆ ಕಿವಿ ಮಾತು ಹೇಳಿದ್ದಾರೆ.

ರಾಮಪಾಲ್ ಕಶ್ಯಪ್ 14 ವರ್ಷಗಳ ಹಿಂದೆ ಬಿಜೆಪಿಯ ಪ್ರಬಲ ವ್ಯಕ್ತಿ (ಮೋದಿ) ಪ್ರಧಾನಿಯಾದ ನಂತರವೇ ಪಾದರಕ್ಷೆ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರನ್ನು ಭೇಟಿಯಾದ ಪ್ರಧಾನಿ ಮೋದಿ ಹೊಸ ಶೂಗಳನ್ನು ಉಡುಗೊರೆ ನೀಡಿದ್ದಾರೆ.

ಅವರ ಭೇಟಿಯ ವಿಡಿಯೋವನ್ನು ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು,  ‘ನಾನು ಪ್ರಧಾನಿಯಾದ ನಂತರವೇ ಪಾದರಕ್ಷೆ ಧರಿಸುತ್ತೇನೆ ಎಂದು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದ ರಾಮಪಾಲ್ ಕಶ್ಯಪ್ ಜಿ ಅವರನ್ನು ಭೇಟಿಯಾದೆ. ಅವರಿಗೆ ನಾನು ವಿನಮ್ರನಾಗಿದ್ದು, ಅವರ ಪ್ರೀತಿಯನ್ನು ಸ್ವೀಕರಿಸುತ್ತೇನೆ. ಆದರೆ ಅಂತಹ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬರಲ್ಲಿ ನನ್ನ ವಿನಂತಿಯಿದೆ. ನಾನು ನಿಮ್ಮ ಪ್ರೀತಿಯನ್ನು ಗೌರವಿಸುತ್ತೇನೆ. ಆದರೆ ಇಂತಹ ಪ್ರತಿಜ್ಞೆಗಿಂತ ದಯವಿಟ್ಟು ಸಾಮಾಜಿಕ ಮತ್ತು ರಾಷ್ಟ್ರ ನಿರ್ಮಾಣ ಗಮನಹರಿಸಿ’ ಎಂದು ವಿನಂತಿಸಿದ್ದಾರೆ.