ಬ್ರಿಕ್ಸ್‌ ಶೃಂಗಸಭೆಗಾಗಿ ಸದ್ಯ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮಿಳಿನ ಪ್ರಸಿದ್ಧ ಕವಿ, ತತ್ವಜ್ಞಾನಿ ತಿರುವಳ್ಳುವರ್ ಅವರು ಬರೆದ ಶಾಸ್ತ್ರೀಯ ತಮಿಳು ಕವಿತೆ ಸಂಗ್ರಹ ತಿರುಕ್ಕುರಳ್‌ನ ರಷ್ಯನ್‌ ಭಾಷೆಯ ಅನುವಾದದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ನವದೆಹಲಿ: ಬ್ರಿಕ್ಸ್‌ ಶೃಂಗಸಭೆಗಾಗಿ ಸದ್ಯ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮಿಳಿನ ಪ್ರಸಿದ್ಧ ಕವಿ, ತತ್ವಜ್ಞಾನಿ ತಿರುವಳ್ಳುವರ್ ಅವರು ಬರೆದ ಶಾಸ್ತ್ರೀಯ ತಮಿಳು ಕವಿತೆ ಸಂಗ್ರಹ ತಿರುಕ್ಕುರಳ್‌ನ ರಷ್ಯನ್‌ ಭಾಷೆಯ ಅನುವಾದದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಈ ಬಗ್ಗೆ ಮೋದಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ‘ಭಾಷೆಗಳು ಮತ್ತು ಗಡಿಗಳನ್ನು ಮೀರಿದ ತಿರುವಳ್ಳುವರ್ ಅವರ ತಿರುಕ್ಕುರಳ್‌ನ ರಷ್ಯನ್ ಅನುವಾದವನ್ನು ಅಧ್ಯಕ್ಷ ಪುಟಿನ್ ಅವರಿಗೆ ನೀಡಲಾಯಿತು’ ಎಂದಿದ್ದಾರೆ.