‘ಉದ್ಯಮಿ ವಿಜಯ ಮಲ್ಯ ಅವರ 14,131.6 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಎಸ್‌ಬಿಐ ನೇತೃತ್ವದ ಒಕ್ಕೂಟಕ್ಕೆ ಹಸ್ತಾಂತರಿಸಲಾಗಿದೆಯಾದರೂ, ಇದು ಮಲ್ಯ ವಿರುದ್ಧದ ಹಣ ವರ್ಗಾವಣೆ ಆರೋಪಗಳನ್ನು ರದ್ದುಗೊಳಿಸುವುದಿಲ್ಲ ಅಥವಾ ಕೈಬಿಡುವುದಿಲ್ಲ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.
ಪಿಟಿಐ ಮುಂಬೈ
‘ಉದ್ಯಮಿ ವಿಜಯ ಮಲ್ಯ ಅವರ 14,131.6 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಎಸ್‌ಬಿಐ ನೇತೃತ್ವದ ಒಕ್ಕೂಟಕ್ಕೆ ಹಸ್ತಾಂತರಿಸಲಾಗಿದೆಯಾದರೂ, ಇದು ಮಲ್ಯ ವಿರುದ್ಧದ ಹಣ ವರ್ಗಾವಣೆ ಆರೋಪಗಳನ್ನು ರದ್ದುಗೊಳಿಸುವುದಿಲ್ಲ ಅಥವಾ ಕೈಬಿಡುವುದಿಲ್ಲ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.‘ನನ್ನ 14 ಸಾವಿರ ಕೋಟಿ ರು. ವಸೂಲಾಗಿದೆ. ಹೀಗಾಗಿ ನನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಅಂತ್ಯ ಮಾಡಿ’ ಎಂದು ಮಲ್ಯ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಬಾಂಬೆ ಹೈಕೋರ್ಟ್‌ಗೆ ಇ.ಡಿ. ಪ್ರತಿಕ್ರಿಯೆ ಸಲ್ಲಿಸಿದ್ದು, ‘ತನಿಖೆಯಿಂದ ಮಲ್ಯ ನುಣಚಿಕೊಳ್ಳುತ್ತಿದ್ದಾರೆ. ಅವರ ಮೇಲಿನ ಕೇಸು ರದ್ದಿಲ್ಲ’ ಎಂದಿದೆ.
==2027ರ ಮಾರ್ಚ್‌ನಿಂದ ನಿಲುಗಡೆರಹಿತ ಟೋಲ್ ವ್ಯವಸ್ಥೆ: ಗಡ್ಕರಿ
ನವದೆಹಲಿ: ‘ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶದಿಂದ ಯಾವುದೇ ಟೋಲ್ ಪ್ಲಾಜಾಗಳಲ್ಲಿ ವಾಹನ ನಿಲ್ಲಿಸದೆ ಸ್ವಯಂ ಚಾಲಿತ ಟೋಲ್ ಕಡಿತ ಮಾಡುವ ವ್ಯವಸ್ಥೆ ಮಾರ್ಚ್ ಅಂತ್ಯದೊಳಗೆ ದೇಶಾದ್ಯಂತ ಜಾರಿಗೆ ಬರಲಿದೆ’ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಶುಕ್ರವಾರ ಸಮಾರಂಭವೊಂದರಲ್ಲಿ ಅವರು ಮಾತನಾಡಿ. ‘ಈ ಡಿಜಿಟಲ್ ಟೋಲಿಂಗ್ ಪ್ರಕ್ರಿಯೆಯನ್ನು ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಎಲ್ಲೆಡೆ ಆರಂಭಿಸುವ ಉದ್ದೇಶವಿದೆ. ಇದಕ್ಕಾಗಿ ಮಲ್ಟಿ-ಲೇನ್ ಫ್ರೀ ಫ್ಲೋ (ಎಂಎಲ್‌ಎಫ್‌ಎಫ್) ಮಾಡೆಲ್ ಅನ್ನು ಬಳಸಿಕೊಳ್ಳಲಾಗುತ್ತದ’ ಎಂದರು.ಎಂಎಲ್‌ಎಫ್‌ಎಫ್ ಎಂಬುದು ಬ್ಯಾರಿಯರ್ ಮುಕ್ತ ಅಂದರೆ ತಡೆರಹಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಆಗಿದ್ದು, ವಾಹನ ನಿಲ್ಲಿಸದೆ ಅಥವಾ ವೇಗ ಕಡಿಮೆ ಮಾಡದೆ ಸಾಗಿದರೂ ಟೋಲ್ ಪ್ಲಾಜಾಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಉಪಕರಣಗಳ ಮೂಲಕ ವಾಹನಗಳ ಫಾಸ್ಟ್‌ಟ್ಯಾಗ್, ನಂಬರ್ ಪ್ಲೇಟ್‌ಗಳ ಆಧಾರದ ಮೇಲೆ ಸ್ವಯಂಚಾಲಿತವಾಗಿ ಟೋಲ್ ಕಡಿತ ಆಗಲಿದೆ.
==ಬಿಹಾರದ ಭಕ್ತಿಯಾರ್‌ಪುರಕ್ಕೆ ನಿತೀಶ್ ಹೆಸರಿಡಲು ಕೂಗು
ಪಿಟಿಐ ಪಟನಾಬಿಹಾರದ ಮಾಜಿ ಸಿಎಂ, ಜೆಡಿಯು ನೇತಾರ ನಿತೀಶ್ ಕುಮಾರ್ ಅವರ ಹುಟ್ಟೂರಾದ ಭಕ್ತಿಯಾರ್‌ಪುರಕ್ಕೆ ನಿತೀಶ್‌ಪುರ ಎಂದು ಅವರ ಹೆಸರಿಡಬೇಕು ಎಂದು ಎನ್‌ಡಿಎ ಕೂಟದ ಮಿತ್ರ ಪಕ್ಷಗಳಾದ ಲೋಕ ಜನಶಕ್ತಿ ಪಕ್ಷ ಮತ್ತು ಹಿಂದೂಸ್ತಾನಿ ಅವಾಮಿ ಮೋರ್ಚಾ ಪಕ್ಷಗಳು ಆಗ್ರಹಿಸಿವೆ.ಜೀತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮಿ ಮೋರ್ಚಾದ ರಾಷ್ಟ್ರಾಧ್ಯಕ್ಷ ಸಂತೋಷ್ ಕುಮಾರ್ ಸುಮನ್ ಆರಂಭದಲ್ಲಿ ಈ ಬೇಡಿಕೆಯಿಟ್ಟರು. ಇದಕ್ಕೆ ಎಲ್‌ಜೆಪಿ ಮುಖ್ಯಸ್ಥ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕೂಡ ಧ್ವನಿಗೂಡಿಸಿದ್ದು, ‘ಇದು ನಿಜಕ್ಕೂ ಒಳ್ಳೆಯ ಸಲಹೆ. ನಿತೀಶ್ ದೀರ್ಘಕಾಲದವರೆಗೆ ಬಿಹಾರದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಒಂದು ಸ್ಥಳಕ್ಕೆ ಅವರ ಹೆಸರನ್ನಿಡುವುದರಿಂದ ಭವಿಷ್ಯದ ಪೀಳಿಗೆಗಳು ನೆನಪಿಸಿಕೊಳ್ಳುತ್ತವೆ. ಸ್ಥಳಗಳಿಗೆ ಅವರ ಹೆಸರಿಡುವುದರಲ್ಲಿ ಅಥವಾ ಅವರ ಪ್ರತಿಮೆಗಳನ್ನು ನಿರ್ಮಿಸುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದರು.
==ಸಮಂತಾ, ರಾಜಮೌಳಿ, ಲಕ್ಷ್ಮಣ್‌ಗೂ ಎಸ್‌ಐಆರ್ ನೋಟಿಸ್
ಮತಪಟ್ಟಿ ದೃಢೀಕರಣಕ್ಕಾಗಿ ಚು.ಆಯೋಗ ಕ್ರಮಹೈದರಾಬಾದ್: ಚುನಾವಣಾ ಆಯೋಗವು ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ತೆಲಂಗಾಣದ ಹಲವು ಗಣ್ಯರಿಗೂ ನೋಟಿಸ್ ನೀಡಲಾಗಿದೆ. ನೋಟಿಸ್ ಸ್ವೀಕರಿಸಿದವರಲ್ಲಿ ಚಿತ್ರನಟಿ ಸಮಂತಾ ರುತ್ ಪ್ರಭು, ನಟ ವಿಜಯ್ ದೇವರಕೊಂಡ, ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ಸೇರಿದಂತೆ ಹಲವು ಪ್ರಸಿದ್ಧ ವ್ಯಕ್ತಿಗಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಪಟ್ಟಿಯಲ್ಲಿ ತೆಲುಗು ನಟ ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ, ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲ, ನಟ ವೆಂಕಟೇಶ್ ದಗ್ಗುಬಾಟಿ ಮತ್ತು ಅವರ ಪುತ್ರಿಯರು, ನಟ ಆನಂದ್ ದೇವರಕೊಂಡ, ಕ್ರೀಡಾಪಟುಗಳಾದ ಸೈನಾ ನೆಹ್ವಾಲ್, ಮಿಥಾಲಿ ರಾಜ್, ಪುಲ್ಲೇಲ ಗೋಪಿಚಂದ್ ಅವರ ಹೆಸರುಗಳೂ ಸೇರಿವೆ.
ಮತದಾರರ ಪಟ್ಟಿಯ ದೃಢೀಕರಣಕ್ಕಾಗಿ ಈ ನೋಟಿಸ್‌ಗಳನ್ನು ನೀಡಲಾಗಿದೆ. ನೋಟಿಸ್ ಪಡೆದ ವ್ಯಕ್ತಿಗಳು ಪರಿಶೀಲನಾ ಪ್ರಕ್ರಿಯೆಗೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.