ಸಾರಾಂಶ
ಪ್ರಧಾನಿ ಮೋದಿಯ ಕರ್ತವ್ಯಪ್ರಜ್ಞೆಗೆ ನೆಟ್ಟಿಗರ ಮೆಚ್ಚುಗೆ ವ್ಯಕ್ತವಾಗಿದ್ದು, ದೇಶಸೇವೆಗೆ ಪ್ರಧಾನಿ ಮೋದಿಯವರ ಬದ್ಧತೆ ಯುವಜನರಿಗೆ ಸ್ಫೂರ್ತಿ ತುಂಬಲಿದೆ ಎಂಬುದಾಗಿ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರೀಯ ಮಂಡಳಿ ಸಭೆಯಲ್ಲಿ ಗುರುವಾರ ರಾತ್ರಿ 3:30ರವರೆಗೂ ಹಾಜರಿದ್ದರೂ, ಮನೆಗೆ ತೆರಳಿ ತಮ್ಮ ದೈನಂದಿನ ಕೆಲಸ ಮುಗಿಸಿ ವೇಳಾಪಟ್ಟಿಗೆ ಸರಿಯಾಗಿ ಬೆಳಗ್ಗೆ 8 ಗಂಟೆಗೆ ಜಾರ್ಖಂಡ್‌ಗೆ ತೆರಳಲು ವಿಮಾನ ಏರಲು ಬಂದ ಪ್ರಧಾನಿ ಮೋದಿಯ ಕರ್ತವ್ಯಪ್ರಜ್ಞೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ‘ತಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ದೃಢ ವಿಶ್ವಾಸವಿದ್ದರೂ ಪ್ರಧಾನಿ ಮೋದಿಯವರು ಅತ್ಯಂತ ಬದ್ಧತೆಯಿಂದ ತಮ್ಮನ್ನು ತಾವು ದೇಶ ಸೇವೆಗೆ ಸಂಪೂರ್ಣ ಸಮರ್ಪಿಸಿಕೊಂಡಿರುವುದು ಯುವಜನತೆಗೆ ಸ್ಫೂರ್ತಿ ಮೂಡಿಸುತ್ತದೆ’ ಎಂದಿದ್ದಾರೆ.ಪ್ರಧಾನಿ ಮೋದಿ ವಿದೇಶಗಳಿಗೆ ವಿಮಾನದಲ್ಲಿ ತೆರಳುವಾಗಲೂ ರಾತ್ರಿ ಸಮಯವನ್ನೇ ಆಯ್ಕೆ ಮಾಡಿ, ಅಲ್ಲೇ ವಿಶ್ರಾಂತಿ ಪಡೆಯುವ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮಾಡುತ್ತಾರೆ.