: ನಿತೇಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ತೆರೆಕಂಡ ಬೆನ್ನಲ್ಲೇ ಜನರ ಗಮನವನ್ನು ತನ್ನತ್ತ ಸೆಳೆದಿರುವ ಕೇರಳದ ಚಡಯಮಂಗಳಂನಲ್ಲಿರುವ ‘ಜಟಾಯು ಅರ್ಥ್ ಸೆಂಟರ್‌’ಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರ ಭೇಟಿ ನೀಡುವ ಸಾಧ್ಯತೆಯಿದೆ.

ತಿರುವನಂತಪುರಂ: ನಿತೇಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ತೆರೆಕಂಡ ಬೆನ್ನಲ್ಲೇ ಜನರ ಗಮನವನ್ನು ತನ್ನತ್ತ ಸೆಳೆದಿರುವ ಕೇರಳದ ಚಡಯಮಂಗಳಂನಲ್ಲಿರುವ ‘ಜಟಾಯು ಅರ್ಥ್ ಸೆಂಟರ್‌’ಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರ ಭೇಟಿ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್‌ ಗೋಪಿ ಸುಳಿವು ನೀಡಿದ್ದಾರೆ.

ಸೀತೆಯನ್ನು ಅಪಹರಿಸಿ ಪುಷ್ಪಕವಿಮಾನದಲ್ಲಿ ಹೋಗುತ್ತಿದ್ದ ರಾವಣನನ್ನು ತಡೆಯಲು ಜಟಾಯು ಹೋರಾಡಿತ್ತು. ಆಗ ರಾವಣ ಅದರ ರೆಕ್ಕೆ ಕತ್ತರಿಸಿದ್ದ. ಅದು ಕೇರಳದ ಕೊಲ್ಲಂ ಸನಿಹದ ಬೆಟ್ಟದ ಮೇಲೆ ಬಿದ್ದು ಅಸುನೀಗಿತ್ತು ಎಂಬ ಪ್ರತೀತಿ ಇದೆ. ಹೀಗಾಗಿ ಜಟಾಯುವಿನ ಬೃಹತ್ ಶಿಲ್ಪವನ್ನು ಅಲ್ಲಿ ಕೆತ್ತಲಾಗಿದೆ.

ರಾಮಾಯಣ ಗಳಿಕೆ 1547 ಕೋಟಿಗೆ:

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ‘ರಾಮಾಯಣ’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಶುಕ್ರವಾರವರೆಗೆ 1547 ಕೋಟಿ ರು. ಸಂಪಾದಿಸಿದೆ.++‘ಜಟಾಯುನ ನಿರ್ಮಾತೃ ರಾಜೀವ್‌ ಆಂಚಲ್‌ ಜತೆ 2 ದಿನಗಳ ಹಿಂದೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಸಭೆ ನಡೆಸಿ, ದೆಹಲಿಯಲ್ಲಿ ಆ ಶಿಲ್ಪವನ್ನು ಪ್ರದರ್ಶಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಈ ಪ್ರಸ್ತಾವನೆಯನ್ನು ಮೋದಿಯವರ ಗಮನಕ್ಕೂ ತರಲಾಗಿದೆ’ ಎಂದು ಸುರೇಶ್‌ ಗೋಪಿ ಹೇಳಿದ್ದಾರೆ. ಇದೇ ವೇಳೆ, ಜಟಾಯುಗೆ ಶೆಖಾವತ್‌ ಭೇಟಿಯ ಬಳಿಕ ಮೋದಿಯವರೂ ಭೇಟಿ ನೀಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

===