ಮೋದಿ ವರ್ಸಸ್‌ ದೀದಿ ಎಐ ವಿಡಿಯೋ ವಾರ್!

| Published : May 07 2024, 01:01 AM IST / Updated: May 07 2024, 07:40 AM IST

ಸಾರಾಂಶ

ಮಮತಾ ಬ್ಯಾನರ್ಜಿ ಅವರು ಕುಣಿಯುತ್ತಿರುವಂತೆ ಡೀಪ್‌ಫೇಕ್ ಸೃಷ್ಟಿಗೆ ದೂರು ನೀಡಿದ ಬೆನ್ನಲ್ಲೇ ಮೋದಿ ತಮ್ಮ ನೃತ್ಯದ ಡೀಪ್‌ಫೇಕ್‌ ವಿಡಿಯೋ ಪ್ರಕಟಿಸಿ ಇದು ನನಗೆ ಖುಷಿ ನೀಡುತ್ತದೆ ಎಂದಿದ್ದಾರೆ.

ಕೋಲ್ಕತಾ: ‘ಮಮತಾ ಬ್ಯಾನರ್ಜಿ ಅವರು ರ್‍ಯಾಂಪ್‌ ಮೇಲೆ ಕುಣಿಯುವ ಕೃತಕ ಬುದ್ಧಿಮತ್ತೆ (ಎಐ) ವಿಡಿಯೋ ಆಕ್ಷೇಪಾರ್ಹ, ದುರುದ್ದೇಶಪೂರಿತ ಮತ್ತು ಪ್ರಚೋದಿಸುವಂಥದ್ದು’ ಎಂಬ ಆರೋಪ ಹೊರಿಸಿ ಕೋಲ್ಕತಾ ಪೊಲೀಸರ ಸೈಬರ್‌ ಕ್ರೈಂ ವಿಭಾಗ ಸೋಮವಾರ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ನೋಟಿಸ್‌ ಕಳಿಸಿದೆ.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಬಳಕೆದಾರರೊಬ್ಬರು ತಾವು ರ್‍ಯಾಂಪ್‌ ಮೇಲೆ ನೃತ್ಯ ಮಾಡುವ ಎಐ ವಿಡಿಯೋ ಶೇರ್‌ ಮಾಡಿ, ‘ಇದು ನನಗೆ ಖುಷಿ ನೀಡುತ್ತದೆ’ ಎಂದು ಮಮತಾಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.