ಸಾರಾಂಶ
ವಿಪಶ್ಶನ ಆಚರಣೆಯಿಂದ ಯುವಜನರು ತಮ್ಮ ಒತ್ತಡ ನಿವಾರಿಸಿಕೊಂಡು ಉಲ್ಲಸಿತರಾಗಿರಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಮುಂಬೈ: ವಿಪಶ್ಶನ ಆಚರಣೆಯಿಂದ ಯುವಜನರು ತಮ್ಮ ಒತ್ತಡ ನಿವಾರಿಸಿಕೊಂಡು ಉಲ್ಲಸಿತರಾಗಿರಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ವಿಪಶ್ಶನ ಪದ್ಧತಿಯ ಜನಕ ಗೋಯೆಂಕಾ ಅವರ ಜನ್ಮಶತಾಬ್ದಿಯಲ್ಲಿ ಭಾಗವಹಿಸಿ ಮಾತನಾಡುತ್ತಾ, ‘ವಿಪಶ್ಶನ ಮತ್ತು ಧ್ಯಾನ ಪದ್ಧತಿಯನ್ನು ಮುಂಚೆ ವೈರಾಗ್ಯದ ಸಂಕೇತವಾಗಿ ನೋಡಲಾಗುತ್ತಿತ್ತು.
ಆದರೆ ಇಂದು ವಿಪಶ್ಶನವು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಕ್ರಿಯೆಯಾಗಿ ಬದಲಾಗಿದೆ. ವಿಪಶ್ಶನದಿಂದಾಗಿ ಎಲ್ಲ ರೀತಿಯ ಒತ್ತಡ ಮತ್ತು ನರಳಾಟಗಳು ದೂರವಾಗಲಿದ್ದು, ಯುವಜನರು ಇದನ್ನು ಅಭ್ಯಾಸ ಮಾಡಿ ಉಲ್ಲಸಿತರಾಗಿರಬೇಕು’ ಎಂದು ತಿಳಿಸಿದರು.
ಇದೇ ವೇಳೆ ಗೋಯೆಂಕಾ ಅವರೊಂದಿಗಿನ ಒಡನಾಟವನ್ನು ಪ್ರಧಾನಿ ಮೋದಿ ಸ್ಮರಿಸುತ್ತಾ, ‘ಭಗವಾನ್ ಬುದ್ಧ ತಿಳಿಸಿರುವಂತೆ ಎಲ್ಲರೂ ಗುಂಪಿನಲ್ಲಿ ಧ್ಯಾನಕ್ರಿಯೆಯಲ್ಲಿ ತೊಡಗಿದಾಗ ಅದರಿಂದ ಹೆಚ್ಚು ಲಾಭವನ್ನು ಪಡೆಯಬಹುದು.
ಹೀಗಾಗಿ ಈ ರೀತಿಯ ಐಕ್ಯತಾ ಭಾವವೇ ವಿಕಸಿತ ಭಾರತದ ಪ್ರಮುಖ ಆಧಾರಸ್ತಂಭವಾಗಬೇಕು’ ಎಂದು ತಿಳಿಸಿದರು.