ಸಾರಾಂಶ
ರಾಜ್ಯಸಭೆಯ ಸದಸ್ಯೆಯಾಗಿ ಸುಧಾ ಮೂರ್ತಿ ಅವರು ಮೊದಲ ಬಾರಿ ಮಾಡಿದ ಭಾಷಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ನವದೆಹಲಿ: ರಾಜ್ಯಸಭೆಯ ಸದಸ್ಯೆಯಾಗಿ ಸುಧಾ ಮೂರ್ತಿ ಅವರು ಮೊದಲ ಬಾರಿ ಮಾಡಿದ ಭಾಷಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ‘ಮಹಿಳೆಯರ ಆರೋಗ್ಯದ ಬಗ್ಗೆ ಸವಿವರವಾಗಿ ಮಾತನಾಡಿದ್ದಕ್ಕೆ ಸುಧಾ ಮೂರ್ತಿ ಅವರಿಗೆ ಧನ್ಯವಾದ. ಸ್ತ್ರೀಯರ ಆರೋಗ್ಯ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಕೆಲಸ ಮಾಡಿದೆ. ನಾವು ನಿರ್ಮಿಸಿದ ಶೌಚಾಲಯಗಳಿಂದ ದೇಶದ ಮಹಿಳೆಯರಿಗೆ ಸಹಾಯವಾಗಿದೆ’ ಎಂದು ಮೋದಿ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಸುಧಾ ಮೂರ್ತಿ ಮಹಿಳಾ ಆರೋಗ್ಯದ ಕುರಿತು, ವಿಶೇಷವಾಗಿ ಗರ್ಭಕಂಟದ ಕ್ಯಾನ್ಸರ್ ತಡೆಗೆ ನೀಡಲಾಗುವ ಲಸಿಕೆಯ ಬಗ್ಗೆ ಮಾತನಾಡಿದ್ದರು. ಹಾಗೂ ಸರ್ಕಾರದ ಪ್ರಯೋಜಕತ್ವದಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.