ಆಪರೇಷನ್‌ ಸಿಂದೂರದ ವೇಳೆ ಧ್ವಂಸಗೊಂಡಿದ್ದ ಉಗ್ರ ತಾಣಗಳ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದರು.

ನವದೆಹಲಿ: ಆಪರೇಷನ್‌ ಸಿಂದೂರದ ವೇಳೆ ಧ್ವಂಸಗೊಂಡಿದ್ದ ಉಗ್ರ ತಾಣಗಳ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದರು. ‘ಮನ್‌ ಕೀ ಬಾತ್‌’ ಕಾರ್ಯಕ್ರಮದ ವೇಳೆ ಟೀವಿಯಲ್ಲಿ ಈ ಫೋಟೋಗಳನ್ನು ಬಿಡುಗಡೆ ಮಾಡಿದ ಮೋದಿ, ‘ಗಡಿಯಾಚೆ ಉಗ್ರ ತಾಣಗಳನ್ನು ನಿಖರತೆ ಮತ್ತು ನಿರ್ದಿಷ್ಟವಾಗಿ ಧ್ವಂಸಗೊಳಿಸಿದ ನಮ್ಮ ಪಡೆಗಳ ಸಾಹಸ ಅಸಾಧಾರಣವಾಗಿದೆ.

 ಆಪರೇಷನ್ ಸಿಂಧೂರ್ ಕೇವಲ ಸೇನಾ ಕಾರ್ಯಾಚರಣೆಯಲ್ಲ, ಅದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಪರಿವರ್ತನೆಗೊಳ್ಳುತ್ತಿರುವ ಭಾರತದ ಚಿತ್ರವಾಗಿದೆ. ಈ ಚಿತ್ರವು ಇಡೀ ದೇಶವನ್ನು ದೇಶಭಕ್ತಿಯ ಭಾವನೆಯಿಂದ ತುಂಬಿದೆ ಮತ್ತು ಅದನ್ನು ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಚಿತ್ರಿಸಿದೆ’ ಎಂದು ಹೇಳಿದರು.

ಇದೇ ವೇಳೆ ಪಾಕಿಸ್ತಾನದ ಗುಲ್ಪುರ್‌, ಕೊಟ್ಲಿಯ ಅಬ್ಬಾಸ್ ಕ್ಯಾಂಪ್‌ ಮತ್ತು ಭಿಂಬರ್‌ನಲ್ಲಿನ ಬರ್ನಲಾದಲ್ಲಿನ ಧ್ವಂಸಗೊಂಡ ಕ್ಯಾಂಪ್‌ಗಳ ಫೋಟೋಗಳನ್ನು ಬಿಡುಗಡೆ ಮಾಡಿದರು.