ಸಾರಾಂಶ
ವಸುದೈವ ಕುಟುಂಬಕಂ ಎಂಬ ತತ್ವದಡಿಯಲ್ಲಿ ಸಮಸ್ತ ದೇಶವೆಂಬ ಕುಟುಂಬದ ನನ್ನ ಪರಿವಾರಕ್ಕೆ ಆಯುರಾರೋಗ್ಯ ಐಶ್ವರ್ಯ ಸಿಗಲಿ ಎಂಬುದಾಗಿ ಕಾಶಿ ವಿಶ್ವನಾಥನಲ್ಲಿ ಬೇಡಿಕೊಂಡಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ವಾರಾಣಸಿ: ಕಾಶಿಯ ವಿಶ್ವನಾಥ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ನಾನು ಭಾರತದ ‘ತಮ್ಮ ಕುಟುಂಬ’ಗಳ ಒಳಿತಿಗಾಗಿ ವಿಶ್ವನಾಥನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಇತ್ತೀಚೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ನೀಡಿದ್ದ ‘ಪ್ರಧಾನಿ ಮೋದಿಗೆ ಕುಟುಂಬವೇ ಇಲ್ಲ’ ಎಂಬ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಶನಿವಾರದ ತಮ್ಮ ಕಾಶಿ ಭೇಟಿ ಕುರಿತು ಭಾನುವಾರ ಟ್ವೀಟ್ ಮಾಡಿದ ಮೋದಿ ಅವರು,‘ಕಾಶಿ ವಿಶ್ವನಾಥನಲ್ಲಿ ಪ್ರತಿ ಬಾರಿ ಪ್ರಾರ್ಥನೆ ಸಲ್ಲಿಸಿದಾಗ ವಿಶಿಷ್ಟ ಹಾಗೂ ತೃಪ್ತಿ ಸಿಗುತ್ತದೆ. ಕಾಶಿಯಲ್ಲಿ ವಿಶೇಷವಾಗಿ ದೇಶದ ನನ್ನ ಕುಟುಂಬ ವರ್ಗಕ್ಕೆ ಒಳ್ಳೆಯ ಆರೋಗ್ಯ, ಸುಖ ಸಂತೋಷಕ್ಕಾಗಿ ಪ್ರಾರ್ಥನೆ ಸಲ್ಲಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.