ಸಾರಾಂಶ
ಮಹಿಳಾ ಸ್ವಸಹಾಯ ಸಂಘಗಳಿಂದ ಈ ಡ್ರೋನ್ ಬಳಕೆಯಾಗಲಿದ್ದು, ಕೃಷಿ ಕಾರ್ಯಕ್ಕೆ ಡ್ರೋನ್ ಬಳಸಲಿರುವ ರೈತ ಮಹಿಳೆಯರಿಗೆ ಉಪಯುಕ್ತವಾಗಲಿದೆ.
ನವದೆಹಲಿ: ಕೃಷಿ ಚಟುವಟಿಕೆಗಳಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಬಜೆಟ್‌ನಲ್ಲಿ ಘೋಷಿಸಿದ್ದ ‘ನಮೋ ಡ್ರೋನ್ ದೀದಿ’ ಯೋಜನೆಯ ಅಂಗವಾಗಿ 1000 ‘ಡ್ರೋನ್ ದೀದಿ’ಗಳಿಗೆ ಡ್ರೋನ್‌ಗಳನ್ನು ವಿತರಿಸಲಿದ್ದಾರೆ.
ದೇಶದ 11 ಆಯ್ದ 1000 ಸಾವಿರ ಕೃಷಿಯಾಧಾರಿತ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಡ್ರೋನ್ ವಿತರಣೆ ಆಗಲಿವೆ. ಸೋಮವಾರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಈ ಸಮಾರಂಭ ನಡೆಯಲಿದೆ.ಇದೇ ವೇಳೆ ಸಶಕ್ತ ನಾರಿ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ. ದೀನ್‌ದಯಾಳ್ ಅಂತ್ಯೋದಯ ಯೋಜನೆಯ ಮೂಲಕ ಸಬಲರಾಗಿ ಇತರ ಮಹಿಳಾ ಸ್ವಸಹಾಯ ಗುಂಪುಗಳಿಗೂ ಸಹಾಯ ಮಾಡುತ್ತಿರುವ ಸಾಧಕ ಮಹಿಳೆಯರಿಗೆ ‘ಲಖ್‌ಪತಿ ದೀದಿ’ ಹೆಸರಿನಲ್ಲಿ ಸನ್ಮಾನ ಮಾಡಲಿದ್ದಾರೆ.
ಹಾಗೆಯೇ ಸ್ವಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ 8 ಸಾವಿರ ಕೋಟಿ ರು. ಮೌಲ್ಯದ ಸಾಲ ವಿತರಿಸುವ ಯೋಜನೆ ಹಾಗೂ 2 ಸಾವಿರ ಕೋಟಿ ರು. ಮೌಲ್ಯದ ಬಂಡವಾಳ ಸಹಾಯ ನಿಧಿ ವಿತರಿಸುವ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.