ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಸೋನ್‌ಮಾರ್ಗ್‌ ರಾಷ್ಟ್ರೀಯ ಹೆದ್ದಾರಿಯ ಝಡ್‌ ಮೇಡ್‌ ಸುರಂಗಕ್ಕೆ ಇಂದು ಮೋದಿ ಚಾಲನೆ

| Published : Jan 13 2025, 12:46 AM IST / Updated: Jan 13 2025, 07:07 AM IST

ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಸೋನ್‌ಮಾರ್ಗ್‌ ರಾಷ್ಟ್ರೀಯ ಹೆದ್ದಾರಿಯ ಝಡ್‌ ಮೇಡ್‌ ಸುರಂಗಕ್ಕೆ ಇಂದು ಮೋದಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಸೋನ್‌ಮಾರ್ಗ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ 6.5 ಕಿ.ಮೀ ಉದ್ದದ ಝಡ್‌ ಮೇಡ್‌ ಸುರಂಗವನ್ನು ಪ್ರಧಾನಿ ನರೇಂದ್ರ ಸೋಮವಾರ ಉದ್ಘಾಟಿಸಲಿದ್ದಾರೆ.

ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಸೋನ್‌ಮಾರ್ಗ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ 6.5 ಕಿ.ಮೀ ಉದ್ದದ ಝಡ್‌ ಮೇಡ್‌ ಸುರಂಗವನ್ನು ಪ್ರಧಾನಿ ನರೇಂದ್ರ ಸೋಮವಾರ ಉದ್ಘಾಟಿಸಲಿದ್ದಾರೆ.

ಸೋನ್‌ಮಾರ್ಗ್‌ನಿಂದ ಗಂದರ್ಬಲ್‌ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ದ್ವಿಪಥದ ಈ ಮಾರ್ಗ ಝಡ್‌ ಅಕ್ಷರದ ಮಾದರಿಯಲ್ಲಿ ಇರುವ ಕಾರಣ ಅದನ್ನುಝಡ್‌ ಮೇಡ್‌ ಸುರಂಗ ಎಂದು ಕರೆಯಲಾಗಿದೆ. ಈ ಮೊದಲು ಈ ಎರಡು ನಗರಗಳ ನಡುವೆ ಕಡಿದಾದ ರಸ್ತೆಯಲ್ಲಿ ಕೇವಲ 30 ಕಿ.ಮೀ ಮಾರ್ಗದಲ್ಲಿ ವಾಹನ ಸಂಚರಿಸಬಹುದಿತ್ತು. ಜೊತೆಗೆ ಮಳೆಗಾಲ, ಹಿಮಪಾತದ ವೇಳೆ ಈ ಮಾರ್ಗ ಕಡಿತವಾಗುತ್ತಿದ್ದ ಸಾಧ್ಯತೆ ಹೆಚ್ಚುತ್ತಿತ್ತು.

ಆದರೆ ಸುರಂಗ ಮಾರ್ಗದ ನಿರ್ಮಾಣದ ಕಾರಣ ಗಂಟೆಗೆ 70 ಕಿ.ಮೀ ವೇಗದಲ್ಲಿ ವಾಹನ ಸಂಚರಿಸಬಹುದು. ಜೊತೆಗೆ ಎರಡು ಪ್ರದೇಶಗಳ ನಡುವೆ ಸರ್ವಋತು ಸಂಪರ್ಕ ಸಾಧ್ಯವಾಗಲಿದೆ. 

ಸುರಂಗದ ಮಹತ್ವ: 2,400 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ 6.5 ಕಿ.ಮೀ. ಉದ್ದದ ಝಡ್‌ ಮೋಡ್‌ ಸುರಂಗದಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಚಲಿಸುವ ಅವಕಾಶವಿದ್ದು, ಇದು ಶ್ರೀನಗರ ಹಾಗೂ ಸೋನ್‌ಮಾರ್ಗ್‌ ನಡುವಿನ ಸಂಚಾರ ಸಮಯವನ್ನು ತಗ್ಗಿಸಲಿದೆ. ಸುರಂಗವು ಪ್ರತಿ ಗಂಟೆಗೆ 1000 ವಾಹನಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಹವಾಮಾನಗಳಲ್ಲಿಯೂ ಸಂಚಾರಕ್ಕೆ ಯೋಗ್ಯವಾಗಿರುವ ಈ ಸುರಂಗವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೂ ಸಂಪರ್ಕ ಕಲ್ಪಿಸಲಿದೆ. ಜತೆಗೆ, ಇದರಿಂದ ಸೇನೆಯ ಓಡಾಟಕ್ಕೂ ಅನುಕೂಲವಾಗಲಿದೆ.