ಇಂದು ಕಾಶ್ಮಿರದಲ್ಲಿ ಮೋದಿ ಯೋಗ

| Published : Jun 21 2024, 01:04 AM IST / Updated: Jun 21 2024, 05:03 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶ್ರೀನಗರದಲ್ಲಿರುವ ದಾಲ್‌ ಸರೋವರ ತೀರದಲ್ಲಿನ ಶೇರ್‌-ಇ-ಕಾಶ್ಮೀರ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯೋಗ ಮಾಡಲಿದ್ದಾರೆ.

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶ್ರೀನಗರದಲ್ಲಿರುವ ದಾಲ್‌ ಸರೋವರ ತೀರದಲ್ಲಿನ ಶೇರ್‌-ಇ-ಕಾಶ್ಮೀರ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯೋಗ ಮಾಡಲಿದ್ದಾರೆ. ಈ ಮೂಲಕ ಉಗ್ರವಾದ ಪೀಡಿತ ರಾಜ್ಯ ಎಂಬ ಹಣೆಪಟ್ಟಿ ಪಡೆದಿದ್ದ ಕಾಶ್ಮೀರದಲ್ಲಿ ಪರಿವರ್ತನೆಯ ಸಂದೇಶ ಸಾರಲಿದ್ದಾರೆ.

‘ವೈಯಕ್ತಿಕ ಮತ್ತು ಸಮಾಜಕ್ಕಾಗಿ ಯೋಗ’ ಎನ್ನುವ ಕಲ್ಪನೆಯಲ್ಲಿ ಈ ವರ್ಷ ಆಚರಣೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ 7,000 ಜನ ಭಾಗಿಯಾಗಿ ಮೋದಿ ಜತೆಗೇ ಯೋಗ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀನಗರದಾದ್ಯಂತ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.