ಸಾರಾಂಶ
ಕರ್ನಾಟಕದ 11 ನಿಲ್ದಾಣಗಳೂ ಒಳಗೊಂಡಂತೆ ಅಮೃತ ಭಾರತ ಯೋಜನೆಯಡಿಯಲ್ಲಿ ದೇಶದ 553 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ರಾಜ್ಯದಲ್ಲಿ ಯಾವ ನಿಲ್ದಾಣ ಅಭಿವೃದ್ಧಿ?
ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ, ಮಲ್ಲೇಶ್ವರಂ ಮತ್ತು ತುಮಕೂರು ರೈಲು ನಿಲ್ದಾಣ.--
ನವದೆಹಲಿ: ಕರ್ನಾಟಕದ 11 ನಿಲ್ದಾಣಗಳೂ ಒಳಗೊಂಡಂತೆ ಅಮೃತ ಭಾರತ ಯೋಜನೆಯಡಿಯಲ್ಲಿ ದೇಶದ 553 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.ರೈಲು ನಿಲ್ದಾಣಗಳ ಬಳಿ ಸಿಟಿ ಸೆಂಟರ್ ಹಾಗೂ ರೂಫ್‌ಟಾಪ್ ಪ್ಲಾಜಾಗಳನ್ನು ನಿರ್ಮಿಸುವ ಮೂಲಕ ನಿಲ್ದಾಣಗಳನ್ನು ಉನ್ನತವಾಗಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ.
ಈ ಯೋಜನೆಯಲ್ಲಿ ಕರ್ನಾಟಕದ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ, ಮಲ್ಲೇಶ್ವರಂ ಮತ್ತು ತುಮಕೂರು ರೈಲು ನಿಲ್ದಾಣಗಳು ಪುನರಾಭಿವೃದ್ಧಿಗೆ ಆಯ್ಕೆಗೊಂಡಿವೆ.ಅಲ್ಲದೇ ವರ್ಚುವಲ್ ಆಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೋದಿ ಅವರು ವಿವಿಧ ರಾಜ್ಯಗಳ 1,500 ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕೂ ಶಂಕುಸ್ಥಾಪನೆ ಮಾಡಲಿದ್ದಾರೆ. 19,000 ಕೋಟಿ ರು. ವೆಚ್ಚದಲ್ಲಿ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಮೃತ ಭಾರತ ಯೋಜನೆ ಹಮ್ಮಿಕೊಳ್ಳಲಾಗಿದೆ.ಸುಮಾರು 385 ಕೋಟಿ ರೂಪಾಯಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳಿಸಲಾಗಿರುವ ಉತ್ತರ ಪ್ರದೇಶದ ಗೋಮತಿ ನಗರ ನಿಲ್ದಾಣವನ್ನೂ ಇದೇ ಕಾರ್ಯಕ್ರಮದಲ್ಲಿ ಮೋದಿ ಉದ್ಘಾಟಿಸಲಿದ್ದಾರೆ.