ಸಾರಾಂಶ
ಮಹಾರಾಷ್ಟ್ರದಲ್ಲಿ ಕೇವಲ ಇಬ್ಬರ ಮತಪತ್ರ ಸಂಗ್ರಹಣೆಗಾಗಿ ಚುನಾವಣಾ ಸಿಬ್ಬಂದಿ ಬರೋಬ್ಬರಿ 107 ಕಿ.ಮೀ. ದೂರ ಸಂಚರಿಸಿದ್ದಾರೆ
ಗಡಚಿರೋಲಿ (ಮಹಾರಾಷ್ಟ್ರ): ಮತದಾನ ಮಾಡುವಂತೆ ಚುನಾವಣಾ ಆಯೋಗ ಹೇಗೆಲ್ಲ ಪ್ರಚಾರ ಮಾಡಿದರೂ ನಗರ ಪ್ರದೇಶಗಳಲ್ಲಿ ಮತ ಹಾಕಲು ಮತದಾರರು ಬರುವುದು ತುಸು ತ್ರಾಸದಾಯಕ. ಆದರೆ ಮಹಾರಾಷ್ಟ್ರದಲ್ಲಿ ಕೇವಲ ಇಬ್ಬರ ಮತಪತ್ರ ಸಂಗ್ರಹಣೆಗಾಗಿ ಚುನಾವಣಾ ಸಿಬ್ಬಂದಿ ಬರೋಬ್ಬರಿ 107 ಕಿ.ಮೀ. ದೂರ ಸಂಚರಿಸಿದ್ದಾರೆ.
ಗಡಚಿರೋಳಿಯಲ್ಲಿ ಶತಾಯುಷಿಯಾಗಿರುವ ಕಿಷ್ಟಯ್ಯ ಮದರ್‌ಬೋಯ್ನಾ ಅವರಿಗೆ ಮತ ಹಾಕಲು ಚುನಾವಣಾ ಸಿಬ್ಬಂದಿಯೆ ಅವರ ಬಳಿ ಸೂಕ್ತ ದಾಖಲೆಪತ್ರಗಳಿಗೆ ಸಹಿ ಹಾಕಿಸಿ ಮನೆಯಿಂದಲೇ ಅಂಚೆಮತ ಹಾಕಲು ವ್ಯವಸ್ಥೆ ಮಾಡಿದ್ದರು. ಅದರಂತೆ ಅವರ ಹಾಡಿಯಲ್ಲಿ ಕೇವಲ ಇಬ್ಬರ ಅಂಚೆಮತ ಪಡೆಯುವ ಸಲುವಾಗಿ ಚುನಾವಣಾ ಸಿಬ್ಬಂದಿ ಜಿಲ್ಲಾಕೇಂದ್ರದಿಂದ ಬರೋಬ್ಬರಿ 107 ಕಿ.ಮೀ ದುರ್ಗಮ ಹಾದಿಯಲ್ಲಿ ಸಾಗಿ ಮತ ಚಲಾವಣೆ ಮಾಡಿಸಿದ್ದಾರೆ. ಆಗ ಕಿಷ್ಟಯ್ಯ 45 ನಿಮಿಷಗಳ ಕಾಲ ತ್ರಾಸಪಟ್ಟು ಮತ ಚಲಾವಣೆ ಮಾಡಿದರು ಎಂಬುದಾಗಿ ಚುನಾವಣಾ ಸಿಬ್ಬಂದಿ ತಿಳಿಸಿದ್ದಾರೆ.