ಗರ್ಭಕಂಠದ ಕ್ಯಾನ್ಸರ್‌ಗೆ ನಟಿ, ಮಾಡೆಲ್‌ ಪೂನಂ ಪಾಂಡೆ ಬಲಿ

| Published : Feb 03 2024, 01:49 AM IST / Updated: Feb 03 2024, 07:47 AM IST

ಗರ್ಭಕಂಠದ ಕ್ಯಾನ್ಸರ್‌ಗೆ ನಟಿ, ಮಾಡೆಲ್‌ ಪೂನಂ ಪಾಂಡೆ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ 32ನೇ ವಯಸ್ಸಿಗೆ ಪ್ರಸಿದ್ಧ ನಟಿ ಪೂನಂ ಪಾಂಡೆ ಗರ್ಭಕಂಠದಿಂದ ಕೊನೆಯುಸಿರು ಎಳೆದಿದ್ದಾರೆ ಎಂದು ಅವರ ಮ್ಯಾನೇಜರ್‌ ಘೋಷಣೆ ಮಾಡಿದ್ದಾರೆ.

ಮುಂಬೈ: ತಮ್ಮ ಬೋಲ್ಡ್‌ ದೃಶ್ಯಗಳ ಮೂಲಕ ಹೆಸರುವಾಸಿಯಾಗಿದ್ದ ನಟಿ ಹಾಗೂ ಮಾಡೆಲ್‌ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗಿ, 32ನೇ ವಯಸ್ಸಿಗೆ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್‌ ಹೇಳಿದ್ದಾರೆ.

ಶುಕ್ರವಾರ ಪೂನಂ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರ ತಂಡವು, ನಟಿಯ ಸಾವಿನ ಸುದ್ದಿ ಹಂಚಿಕೊಂಡಿದೆ. ಇದೇ ವೇಳೆ, ‘ಇಂದಿನ ಮುಂಜಾನೆ ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ’ ಎಂದು ಅವರ ಮ್ಯಾನೇಜರ್‌ ನಿಕಿತಾ ಶರ್ಮಾ ಹೇಳಿದ್ದಾರೆ.

ಪೂನಂ ಈ ವ್ಯಾಧಿಗೆ ತುತ್ತಾಗಿದ್ದರೂ ತಮ್ಮ ಅನೇಕ ಆಪ್ತರಿಗೂ ಈ ವಿಷಯ ತಿಳಿಸಿರಲಿಲ್ಲ ಎಂದು ಗೊತ್ತಾಗಿದೆ.

ಆದರೆ ಪೂನಂ ಸಾವಿನ ಬಗ್ಗೆ ಆಕೆಯ ಕುಟುಂಬ ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲದೆ ಕುಟುಂಬ ಸದಸ್ಯರ ಫೋನ್‌ ಆಫ್‌ ಆಗಿದೆ ಎನ್ನಲಾಗಿದೆ. ಹೀಗಾಗಿ ಆಕೆಯ ಸಾವಿನ ಬಗ್ಗೆ ನಾನಾ ಅನುಮಾನ ಉಂಟಾಗಿವೆ.

ಬೆತ್ತಲೆ ಬೆಡಗಿ: ಉತ್ತರ ಪ್ರದೇಶದ ಕಾನ್ಪುರ ಮೂಲದ ಪೂನಂ, 2015ರಲ್ಲಿ ‘ನಶಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಅದಾದ ಬಳಿಕ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು.

2011ರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತವು ಗೆಲುವು ಸಾಧಿಸಿದರೆ ತಾನು ಬೆತ್ತಲಾಗಿ ಕಾಣಿಸಿಕೊಳ್ಳುತ್ತೇನೆ ಎಂಬ ವಿಚಿತ್ರ ಹೇಳಿಕೆ ನೀಡಿದ್ದ ಪೂನಂ ಆಗಾಗ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು. 2022ರಲ್ಲಿ ‘ಲಾಕ್‌ ಅಪ್‌’ ಎಂಬ ರಿಯಾಲಿಟಿ ಶೋನಲ್ಲಿ ಪೂನಂ ಕಾಣಿಸಿಕೊಂಡಿದ್ದರು.

ಏನಿದು ಗರ್ಭಕಂಠದ ಕ್ಯಾನ್ಸರ್‌?
ದೇಶದಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ತುಸು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹ್ಯೂಮನ್ ಪ್ಯಾಪಿಲೋಮಾ ವೈರಸ್‌ (ಎಚ್‌ಪಿವಿ) ಎಂಬ ವೈರಸ್‌ನ ಮೂಲಕ ಈ ಕ್ಯಾನ್ಸರ್ ಹರಡುತ್ತದೆ. ಇದೊಂದು ಲೈಂಗಿಕವಾಗಿ ಹರಡುವ ರೋಗವಾಗಿದ್ದು, ಸಕ್ರಿಯ ಲೈಂಗಿಕ ಜೀವನ ಹೊಂದಿರುವವರಲ್ಲಿ ಅಥವಾ ನೀಲಿ ಚಿತ್ರ ನಟಿಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.