ಕದನ ವಿರಾಮದ ನಡುವೆಯೇ ಇರಾನ್‌ ಮತ್ತು ಅಮೆರಿಕದ ಪಡೆಗಳು ಗುರುವಾರ ರಾತ್ರಿ ಹಾಗೂ ಶುಕ್ರವಾರ ಸಂಜೆ 2 ಬಾರಿ ಹೋರ್ಮುಜ್‌ ಜಲಸಂಧಿಯಲ್ಲಿ ಪರಸ್ಪರರ ಮೇಲೆ ದಾಳಿ ನಡೆಸಿದ್ದು, ಮತ್ತೊಮ್ಮೆ ಯುದ್ಧಾಂತಕ ಸೃಷ್ಟಿಸಿದೆ. ಈ ದಾಳಿಗೆ ಇರಾನ್‌ ಮತ್ತು ಅಮೆರಿಕ ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ ಮಾಡಿವೆ.

- ಸದ್ಯ ಅಮೆರಿಕ- ಇರಾನ್‌ ನಡುವೆ ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಜಾರಿಯಲ್ಲಿ

- ಗುರುವಾರ, ಶುಕ್ರವಾರ ಹೋರ್ಮುಜ್‌ನಲ್ಲಿ ಹಡುಗುಗಳ ಮೇಲೆ ಗುಂಡಿನ ದಾಳಿ

- ಪರಸ್ಪರ ಮೇಲೆ ದಾಳಿ ಬಗ್ಗೆ ಅಮೆರಿಕ, ಇರಾನ್‌ನಿಂದ ಆರೋಪ, ಪ್ರತ್ಯಾರೋಪ

- ನಮ್ಮ ಮೇಲೆ ಇರಾನ್‌ನಿಂದ ಡ್ರೋನ್‌, ಕ್ಷಿಪಣಿ ದಾಳಿ: ಯುಎಇನಿಂದ ಆರೋಪವಾಷಿಂಗ್ಟನ್‌: ಕದನ ವಿರಾಮದ ನಡುವೆಯೇ ಇರಾನ್‌ ಮತ್ತು ಅಮೆರಿಕದ ಪಡೆಗಳು ಗುರುವಾರ ರಾತ್ರಿ ಹಾಗೂ ಶುಕ್ರವಾರ ಸಂಜೆ 2 ಬಾರಿ ಹೋರ್ಮುಜ್‌ ಜಲಸಂಧಿಯಲ್ಲಿ ಪರಸ್ಪರರ ಮೇಲೆ ದಾಳಿ ನಡೆಸಿದ್ದು, ಮತ್ತೊಮ್ಮೆ ಯುದ್ಧಾಂತಕ ಸೃಷ್ಟಿಸಿದೆ. ಈ ದಾಳಿಗೆ ಇರಾನ್‌ ಮತ್ತು ಅಮೆರಿಕ ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ ಮಾಡಿವೆ.

ಇಷ್ಟಾದರೂ ಹೋರ್ಮುಜ್‌ ಜಲಸಂಧಿಯಲ್ಲಿ ಕದನ ವಿರಾಮ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

ಪರಸ್ಪರರ ಆರೋಪ ಏನು?:

‘ಅಮೆರಿಕವು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಯುಎಇಯ ಫುಜೈರಾ ಬಂದರಿನ ಸಮೀಪದಲ್ಲಿರುವ ತನ್ನ ತೈಲ ಟ್ಯಾಂಕರ್‌ ಮೇಲೆ ಹಾಗೂ ಬಂದಾರ್‌ ಖಾಮಿರ್‌, ಖಾಸಿಂ ದ್ವೀಪದ ನಾಗರಿಕ ಪ್ರದೇಶದ ಮೇಲೆ ಅಮೆರಿಕ ಸೇನೆ ದಾಳಿ ಮಾಡಿದೆ’ ಎಂದು ಇರಾನ್‌ ಆರೋಪಿಸಿದೆ.

ಇದಕ್ಕೆ ಅಮೆರಿಕ ಸೇನೆ ತಿರುಗೇಟು ನೀಡಿದ್ದು, ’ಮೊದಲು ದಾಳಿ ಮಾಡಿದ್ದೇ ಇರಾನ್‌. ಹೋರ್ಮುಜ್‌ ಜಲಸಂಧಿಯಲ್ಲಿದ್ದ ನಮ್ಮ ಮೂರು ಯುದ್ಧನೌಕೆಗಳ ಮೇಲೆ ಇರಾನ್‌ ಕ್ಷಿಪಣಿ, ಡ್ರೋನ್‌ ಮತ್ತು ಬೋಟ್‌ಗಳನ್ನು ಬಳಸಿ ಹೋರ್ಮುಜ್‌ ಜಲಸಂಧಿಯಲ್ಲಿ ದಾಳಿ ಮಾಡಿದೆ. ಸ್ವರಕ್ಷಣೆಯ ಭಾಗವಾಗಿ ನಾವು ಪ್ರತಿ ದಾಳಿ ನಡೆಸಿದ್ದೇವೆ’ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕೂಡ ಇದನ್ನೇ ಹೇಳಿದ್ದು, ಇರಾನ್‌ ದಾಳಿ ಮಾಡಿದರೂ ನಮ್ಮ ನೌಕೆಗಳನ್ನು ಸುರಕ್ಷಿತವಾಗಿ ದಾಟಿಸಿದ್ದೇವೆ ಎಂದಿದ್ದಾರೆ.

ಇನ್ನು ಶುಕ್ರವಾರ ಸಂಜೆ ತನ್ನ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸುತ್ತಿದ್ದ ಇರಾನ್ ಧ್ವಜ ಹೊತ್ತ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಗುಂಡು ಹಾರಿಸಿ ನಿಷ್ಕ್ರಿಯಗೊಳಿಸಿರುವುದಾಗಿ ಅಮೆರಿಕ ಸೇನೆ ಹೇಳಿದೆ.

ದುಬೈ ಮೇಲೂ ದಾಳಿ:

ಈ ನಡುವೆ, ಶುಕ್ರವಾರ ಬೆಳಗ್ಗೆ ಯುಎಇ ಮೇಲೆ ಇರಾನ್‌ ಅಪ್ರಚೋದಿತ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ನಮ್ಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಅವುಗಳನ್ನು ಹೊಡೆದುರುಳಿಸಿವೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.

ಇದೇ ವೇಳೆ, ಕ್ಷಿಪಣಿ, ಡ್ರೋನ್‌ಗಳ ಅವಶೇಷಗಳತ್ತ ಯಾರೂ ಹೋಗಬಾರದು. ಅವುಗಳನ್ನು ಮುಟ್ಟುವ ಪ್ರಯತ್ನ ಮಾಡಬಾರದು ಎಂದು ರಕ್ಷಣಾ ಸಚಿವಾಲಯ ನಾಗರಿಕರಿಗೆ ಮನವಿ ಮಾಡಿದೆ.