ಸಾರಾಂಶ
ನವದೆಹಲಿ: ವಿಮಾನಗಳು ಮತ್ತು ಬಸ್‌ನಲ್ಲಿ ಟಿಕೆಟ್ ಬುಕ್ ಮಾಡುವಾಗ ಇರುವ ಆಸನ ಆಯ್ಕೆ ವ್ಯವಸ್ಥೆ ಶೀಘ್ರದಲ್ಲಿ ರೈಲಿನಲ್ಲಿಯೂ ಆರಂಭವಾಗುವ ನಿರೀಕ್ಷೆಯಿದೆ. ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ತಮ್ಮಿಷ್ಟದ ಸೀಟು ಆಯ್ಕೆ ಮಾಡುಕೊಳ್ಳುವ ಅವಕಾಶವನ್ನು ರೈಲ್ವೆ ಇಲಾಖೆ ಜನರಿಗೆ ನೀಡಲಿದೆ.
‘ಈ ಹೊಸ ಬದಲಾವಣೆಯು ಡಿಸೆಂಬರ್ ವೇಳೆಗೆ ಜಾರಿಗೆ ಬರುವ ಸಾಧ್ಯತೆ ಇದೆ’ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಈ ಸಿಸ್ಟಂ ಅನ್ನು ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇದರ ಪ್ರಗತಿ ಪರಿಶೀಲಿಸಿದ್ದಾರೆ. ಇದರಲ್ಲಿ ರೋಗಿಗಳು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಎಂಬೆಲ್ಲಾ ಆಯ್ಕೆಗಳು ಇರಲಿವೆ’ ಎಂದು ತಿಳಿಸಿದ್ದಾರೆ.
ಈವರೆಗೂ ರೈಲ್ವೆಯಲ್ಲಿ ಸೀಟು ಬುಕ್ ಮಾಡುವಾಗ ಬೇಕಾದ ಸೀಟು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಲಿಲ್ಲ. ಅಲ್ಲದೆ, ಯಾವ ಸೀಟು ಖಾಲಿ ಇದೆ ಎಂಬ ಮಾಹಿತಿ ಕೂಡ ಸಿಗುತ್ತಿರಲಿಲ್ಲ. ಹೀಗಾಗಿ ಲೋವರ್ ಬರ್ತ್ ಬೇಕಿರುವ ಜನರು ಬುಕ್ಕಿಂಗ್ ಬಳಿಕ ನಿರಾಶರಾಗುತ್ತಿದ್ದರು. ಹೊಸ ವ್ಯವಸ್ಥೆ ಜಾರಿಗೆ ಬಂದರೆ ಇದಕ್ಕೆ ಬ್ರೇಕ್ ಬೀಳಿದೆ.