ವಿಶ್ವಬ್ಯಾಂಕ್‌ ಹೇಳಿದ್ದಕ್ಕಿಂತಲೂ ಭಾರತದಲ್ಲಿ ಬಡತನ ಇಳಿಕೆ!

| N/A | Published : Jun 11 2025, 11:43 AM IST

poverty

ಸಾರಾಂಶ

ವಿಕಸಿತ ಭಾರತದತ್ತ ಹೆಜ್ಜೆ ಹಾಕುತ್ತಿರುವ ಭಾರತದಲ್ಲಿ, ಕಳೆದ 2024ರಲ್ಲಿ ಬಡತನದ ಪ್ರಮಾಣ ಶೇ. 4.6ಕ್ಕೆ ಇಳಿಕೆಯಾಗಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ದ ಅಂದಾಜು ವರದಿ ತಿಳಿಸಿದೆ.

ನವದೆಹಲಿ: ವಿಕಸಿತ ಭಾರತದತ್ತ ಹೆಜ್ಜೆ ಹಾಕುತ್ತಿರುವ ಭಾರತದಲ್ಲಿ, ಕಳೆದ 2024ರಲ್ಲಿ ಬಡತನದ ಪ್ರಮಾಣ ಶೇ. 4.6ಕ್ಕೆ ಇಳಿಕೆಯಾಗಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ದ ಅಂದಾಜು ವರದಿ ತಿಳಿಸಿದೆ. ಈ ಮೂಲಕ, ವಿಶ್ವಬ್ಯಾಂಕ್‌ನ ವರದಿ ಪ್ರಕಾರ 2023ರಲ್ಲಿದ್ದ ಶೇ.5.3ರಷ್ಟು ಬಡತನದಲ್ಲಿ ಮತ್ತಷ್ಟು ಕುಸಿತ ಕಂಡಿದ್ದು ಕಂಡುಬಂದಿದೆ.

ವರದಿಯ ಪ್ರಕಾರ, ಬಡತನ ಕಡಿಮೆ ಮಾಡುವಲ್ಲಿ ದೇಶವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ದತ್ತಾಂಶ ಸಂಗ್ರಹದ ಹೊಸ ಮಾದರಿ ಅಳವಡಿಸಿಕೊಳ್ಳುವಿಕೆ ಹಾಗೂ ವ್ಯಾಖ್ಯಾನಗಳ ನವೀಕರಣದಿಂದ ಇದು ಸಾಧ್ಯವಾಗಿದೆ. ಡೇಟಾ ಸಂಗ್ರಹದ ಹೊಸ ವ್ಯವಸ್ಥೆಯಲ್ಲಿ, ವೆಚ್ಚದ ಬಗ್ಗೆ ಹೆಚ್ಚು ನಿಖರವಾದ ಚಿತ್ರಣವನ್ನು ಒದಗಿಸುವ ಮಾಡಿಫೈಡ್‌ ಮಿಕ್ಸ್‌ಡ್‌ ರೀಕಾಲ್‌ ವಿಧಾನವನ್ನು ಬಳಸಲಾಗಿದೆ.

2017ರಲ್ಲಿ ದಿನಕ್ಕೆ 184.02 ರು. ಇದ್ದ ಜಾಗತಿಕ ಬಡತನದ ರೇಖೆಯನ್ನು ವಿಶ್ವಬ್ಯಾಂಕ್‌ 2012ರಲ್ಲಿ 256.77 ರು.ಗೆ ಹೆಚ್ಚಿಸಿತ್ತು. ಇದರಿಂದಾಗಿ ಜಾಗತಿಕವಾಗಿ ಬಡವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 22.6 ಕೋಟಿ ಜನ ಕಡುಬಡವರಿದ್ದರು ಎನ್ನಲಾಗಿತ್ತು. ಆದರೆ ಇದೀಗ ಭಾರತದಲ್ಲಾಗಿರುವ ಸುಧಾರಣೆಯಿಂದಾಗಿ ಈ ಸಂಖ್ಯೆ 12.5 ಕೋಟಿಗೆ ಇಳಿಕೆಯಾಗಿದೆ.

2011-12ರಲ್ಲಿ ಬಡತನವು ಶೇ.16.22ರಷ್ಟಿತ್ತು. ಇದು 2022-23ರ ಹೊತ್ತಿಗೆ ಶೇ.5.25ಕ್ಕೆ ಇಳಿಕೆಯಾಗಿತ್ತು.

Read more Articles on