ಗಗನಕ್ಕೇರಿದ್ದ ದರ : ಜೋಶಿ ಸೂಚನೆ ಬೆನ್ನಲ್ಲೇ ಪ್ರಯಾಗ ವಿಮಾನ ಟಿಕೆಟ್‌ ದರ 50% ಇಳಿಕೆ!

| N/A | Published : Jan 30 2025, 08:08 AM IST

Flight

ಸಾರಾಂಶ

ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಸೇವೆ ನೀಡುತ್ತಿರುವ ವಿಮಾನಯಾನ ಸಂಸ್ಥೆಗಳ ದರ ಏರಿಕೆ ಬರೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಡಿವಾಣ ಹಾಕಿದ್ದಾರೆ.

 ನವದೆಹಲಿ: ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಸೇವೆ ನೀಡುತ್ತಿರುವ ವಿಮಾನಯಾನ ಸಂಸ್ಥೆಗಳ ದರ ಏರಿಕೆ ಬರೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಡಿವಾಣ ಹಾಕಿದ್ದಾರೆ. ಕಂಪನಿಗಳ ಈ ಅಟಾಟೋಪದ ಬಗ್ಗೆ ಸಚಿವ ಜೋಶಿ ಬುಧವಾರವಷ್ಟೇ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.

ಅದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯವು ದರ ಇಳಿಕೆ ಮಾಡುವಂತೆ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ. ಜೊತೆಗೆ ದರವನ್ನು ಮಿತಿಯಲ್ಲೇ ಇರಿಸುವಂತೆ ಸೂಚಿಸಿದೆ. ಪರಿಣಾಮವಾಗಿ ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಕಂಪನಿಗಳು ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನಗಳ ಟಿಕೆಟ್‌ ದರವನ್ನು ಶೇ.30ರಿಂದ ಶೇ.50ರವರೆಗೂ ಇಳಿಸಿವೆ

ವಿಮಾನ ಟಿಕೆಟ್‌ ದರ ಏರಿಕೆ ಬಗ್ಗೆ ಬುಧವಾರ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು, ಟಿಕೆಟ್‌ ದರ ಏರಿಕೆಯಿಂದಾಗಿ ಭಕ್ತರು ಕುಂಭ ಮೇಳಕ್ಕೆ ಹೋಗುವುದಕ್ಕೆ ಭಾರಿ ತೊಂದರೆಯಾಗುತ್ತಿದೆ. ಬೆಲೆ ಇಳಿಕೆಗೆ ಸೂಚಿಸುವಂತೆ ಡಿಜಿಸಿಎಗೆ ಪತ್ರ ಬರೆದಿದ್ದರು.