ಕುಂಭಮೇಳದಲ್ಲಿಂದು ಮಾಘಿ ಪೂರ್ಣಿಮೆ ಪುಣ್ಯಸ್ನಾನ

| Published : Feb 12 2025, 12:32 AM IST

ಸಾರಾಂಶ

ಮಹಾಕುಂಭ ಮೇಳದಲ್ಲಿ ಮಾಘಿ ಪೂರ್ಣಿಮೆ ನಿಮಿತ್ತ ಫೆ.12ರ ಬುಧವಾರ ಪುಣ್ಯಸ್ನಾನ ನಡೆಯಲಿದೆ. ಇದು ಕುಂಭಮೇಳದ ಅವಧಿಯಲ್ಲಿ ನಡೆಯುವ ಒಟ್ಟು 6 ಪುಣ್ಯಸ್ನಾನಗಳ ಪೈಕಿ 5ನೆಯದ್ದು. 6ನೇ ಪುಣ್ಯಸ್ನಾನ ಫೆ.26ರ ಮಹಾಶಿವರಾತ್ರಿಯಂದು ನಡೆಯಲಿದೆ.

ಮಹಾಕುಂಭ ನಗರ: ಮಹಾಕುಂಭ ಮೇಳದಲ್ಲಿ ಮಾಘಿ ಪೂರ್ಣಿಮೆ ನಿಮಿತ್ತ ಫೆ.12ರ ಬುಧವಾರ ಪುಣ್ಯಸ್ನಾನ ನಡೆಯಲಿದೆ. ಇದು ಕುಂಭಮೇಳದ ಅವಧಿಯಲ್ಲಿ ನಡೆಯುವ ಒಟ್ಟು 6 ಪುಣ್ಯಸ್ನಾನಗಳ ಪೈಕಿ 5ನೆಯದ್ದು. 6ನೇ ಪುಣ್ಯಸ್ನಾನ ಫೆ.26ರ ಮಹಾಶಿವರಾತ್ರಿಯಂದು ನಡೆಯಲಿದೆ.

ಮಾಘಿ ಪೂರ್ಣಿಮೆ ಹಿನ್ನೆಲೆ, ಮಂಗಳವಾರ ಪ್ರಯಾಗ್‌ರಾಜ್‌ಗೆ ಕೋಟ್ಯಂತರ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ.

ಮಂಗಳವಾರ ಮುಂಜಾನೆ 4 ಗಂಟೆಯಿಂದ ಕುಂಭ ಸ್ಥಳವನ್ನು ''''ವಾಹನ ರಹಿತ ವಲಯ'''' ಎಂದು ಘೋಷಿಸಿದ್ದು, ಸಂಜೆ 5ರಿಂದ ಇಡೀ ನಗರಕ್ಕೆ ನಿಯಮ ಅನ್ವಯವಾಗಲಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ವಾಹನಗಳ ಸಂಚಾರಕ್ಕೆ ನಿಷೇಧವಿರುತ್ತದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.