ಸಾರಾಂಶ
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಾಜಿ ನಿರ್ದೇಶಕ, ಗೋವಿಂದರಾಜನ್ ಪದ್ಮನಾಭನ್ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ 31 ಸಾಧಕರಿಗೆ ಮತ್ತು ಚಂದ್ರಯಾನ-3 ತಂಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಮೊದಲ ವರ್ಷದ ವಿಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ನವದೆಹಲಿ: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಾಜಿ ನಿರ್ದೇಶಕ, ಗೋವಿಂದರಾಜನ್ ಪದ್ಮನಾಭನ್ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ 31 ಸಾಧಕರಿಗೆ ಮತ್ತು ಚಂದ್ರಯಾನ-3 ತಂಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಮೊದಲ ವರ್ಷದ ವಿಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ 13 ವಿಜ್ಞಾನಿಗಳಿಗೆ ‘ವಿಜ್ಞಾನ ಶ್ರೀ ಪುರಸ್ಕಾರ’ ಮತ್ತು 18 ಸಾಧಕರಿಗೆ ವಿಜ್ಞಾನ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಹಾಗೂ ಚಂದ್ರಯಾನ- 3 ಭಾಗವಾಗಿದ್ದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಂಡಕ್ಕೆ ವಿಜ್ಞಾನ ತಂಡ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ನೀಡಿದರು.
ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್ಸಿಯ ನಿರ್ದೇಶಕಿ ಅನ್ನಪೂರ್ಣಿ ಸುಬ್ರಮಣಿಯಂ, ಜೀವಶಾಸ್ತ್ರಜ್ಞ ಉಮೇಶ್ ವರ್ಷ್ನೆ, ಅರವಿಂದ ಪೆನ್ಮಸ್ಟಾ, ಮಹೇಶ್ ರಮೇಶ್ ಕಾಕಡೆ ಹಾಗೂ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಉರ್ಬಾಸಿ ಸಿನ್ಹಾ ಕೂಡ ಸೇರಿದ್ದಾರೆ.