ಇಲ್ಲಿರುವ ಪ್ರಸಿದ್ಧ ಹನುಮಾನ್‌ ಗಢಿ ದೇಗುಲದ ಮುಖ್ಯ ಅರ್ಚಕ ಮಹಾಂತ್‌ ಪ್ರೇಮ್‌ ದಾಸ್‌, ಬುಧವಾರ ದೇಗುಲ ಆವರಣ ತೊರೆದು ಅಕ್ಷಯ ತೃತೀಯ ಹಿನ್ನೆಲೆ ಮೆರವಣಿಗೆ ಮೂಲಕ ರಾಮ ಮಂದಿರಕ್ಕೆ ಭೇಟಿ ನೀಡಿದರು.

ಅಯೋಧ್ಯೆ: ಇಲ್ಲಿರುವ ಪ್ರಸಿದ್ಧ ಹನುಮಾನ್‌ ಗಢಿ ದೇಗುಲದ ಮುಖ್ಯ ಅರ್ಚಕ ಮಹಾಂತ್‌ ಪ್ರೇಮ್‌ ದಾಸ್‌, ಬುಧವಾರ ದೇಗುಲ ಆವರಣ ತೊರೆದು ಅಕ್ಷಯ ತೃತೀಯ ಹಿನ್ನೆಲೆ ಮೆರವಣಿಗೆ ಮೂಲಕ ರಾಮ ಮಂದಿರಕ್ಕೆ ಭೇಟಿ ನೀಡಿದರು.

ಈ ಮೂಲಕ ದಾಸ್‌ ಹನುಮಾನ್‌ ದೇಗುಲ ಆವರಣದಿಂದ ಹೊರಹೋಗಲು ನಿಷೇಧವಿದ್ದ ಸುಮಾರು 300 ವರ್ಷಗಳ ಹಳೆಯ ಸಂಪ್ರದಾಯವನ್ನು ಕೊನೆಗೊಳಿಸಿದ ಮೊದಲ ದೇಗುಲದ ಮುಖ್ಯ ಅರ್ಚಕ ಎನಿಸಿದರು.

ಈ ನಿಷೇಧದ ಸಂಪ್ರದಾಯ 1737ರಿಂದ 288 ವರ್ಷ ಆಚರಣೆಯಲ್ಲಿತ್ತು. ಒಂದು ಬಾರಿ ಮಹಾಂತರಾಗಿ ನೇಮಕವಾದ ಮೇಲೆ ಅವರ ಜೀವನವೆಲ್ಲ ಈ ದೇಗುಲದಲ್ಲಿ. ಮರಣದ ನಂತರ ಮಾತ್ರ ಅರ ದೇಹ ದೇಗುಲ ಬಿಟ್ಟು ಹೋಗುತ್ತಿತ್ತು

ಸಾವಿರಾರು ನಾಗ ಸಾಧುಗಳು, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆನೆಗಳು, ಒಂಟೆಗಳು, ಕುದುರೆಗಳ, ಸಂಗೀತ ಕಚೇರಿ ತಂಡಗಳು ಮೆರವಣಿಗೆ ಅಂದ ಹೆಚ್ಚಿಸಿದವು. ಸರಯೂ ನದಿ ದಡದಿಂದ ಮೆರವಣಿಗೆ ಆರಂಭವಾಯಿತು. ಈ ವೇಳೆ ದಾಸ್‌ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.