ಸಾರಾಂಶ
ರಾಜಸ್ಥಾನದ ಚಿತ್ತೋರಗಢದಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿ, ಶಾಲೆಯ ಚೇಂಬರ್‌ನಲ್ಲೇ ಪ್ರಿನ್ಸಿಪಾಲರು ಶಿಕ್ಷಕಿಯೊಬ್ಬಳ ಜತೆ ಚಕ್ಕಂದ ನಡೆಸಿ ಮುಖಮೈಥುನ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಜೈಪುರ: ರಾಜಸ್ಥಾನದ ಚಿತ್ತೋರಗಢದಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ, ಶಾಲೆಯ ಚೇಂಬರ್‌ನಲ್ಲೇ ಪ್ರಿನ್ಸಿಪಾಲರು ಶಿಕ್ಷಕಿಯೊಬ್ಬಳ ಜತೆ ಚಕ್ಕಂದ ನಡೆಸಿ ಮುಖ ಮೈಥುನ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಇಬ್ಬರನ್ನೂ ಅಮಾನತು ಮಾಡಲಾಗಿದದೆ ಹಾಗೂ ತನಿಖೆಗೆ 3 ಅಧಿಕಾರಿಗಳ ತಂಡ ರಚಿಸಲಾಗಿದೆ.ಚಿತ್ತೋರ್‌ಗಢ ಜಿಲ್ಲೆಯ ಗಂಗ್ರಾರ್ ಬ್ಲಾಕ್‌ನ ಅಜೋಲಿಯಾ ಕಾ ಖೇಡಾ ಪ್ರದೇಶದ ಸಲೇರಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಚಾರ್ಯ ಮತ್ತು ಶಿಕ್ಷಕಿಯ ನಡುವೆ ಹಲವು ದಿನದಿಂದ ಸಂಬಂಧ ಇತ್ತು ಎನ್ನಲಾಗಿದೆ.
ಇದರ ನಡುವೆ ಇಬ್ಬರೂ ಚಕ್ಕಂದ ಆಡುತ್ತಿದ್ದು, ಶಿಕ್ಷಕಿಯು, ಪ್ಯಾಂಟ್ ಜಿಪ್ ತೆಗೆದ ಶಿಕ್ಷಕನ ಮುಖಮೈಥುನ ಮಾಡಿದ್ದಾರೆ. ಅನೇಕ ಬಾರಿ ಒಬ್ಬರಿಗೊಬ್ಬರು ಮುದ್ದಾಡುವ ದೃಶ್ಯವೂ ಸೆರೆಯಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೋದಿ ವಿರುದ್ಧ ರಾಹುಲ್ ‘ಬಿಳಿ ಟಿ-ಶರ್ಟ್’ ಅಭಿಯಾನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಜನಸಾಮಾನ್ಯರ ಹಕ್ಕುಗಳಿಗಾಗಿ ‘ಬಿಳಿ ಟಿ-ಶರ್ಟ್’ ಅಭಿಯಾನ ಆರಂಭಿಸುವ ಘೋಷಣೆ ಮಾಡಿದ್ದಾರೆ.ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ರಾಹುಲ್, ‘ಆರ್ಥಿಕ ನ್ಯಾಯದಲ್ಲಿ ನಂಬಿಕೆ ಇದ್ದರೆ, ಏರುತ್ತಿರುವ ಸಂಪತ್ತಿನ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ. ತಾರತಮ್ಯಗಳನ್ನು ತಿರಸ್ಕರಿಸಿ ಸಮಾನತೆಗಾಗಿ ಹೋರಾಡಿ. ದೇಶದಲ್ಲಿ ಶಾಂತಿ ಹಾಗೂ ಸ್ಥಿರತೆ ತರಲು ಶ್ರಮಿಸಿ. ಇದಕ್ಕಾಗು ಬಿಳಿ ಟಿ-ಶರ್ಟ್ ಧರಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ. ಅಭಿಯಾನದಲ್ಲಿ ಪಾಲ್ಗೊಂಡು ಹೆಚ್ಚಿನ ಮಾಹಿತಿ ಪಡೆಯಲು https://whitetshirt.in/home/hin ಬಳಸಲು ತಿಳಿಸಿದ್ದಾರೆ.
ಈ ವೇಳೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ‘ಇಂದು ಸರ್ಕಾರ ಬಡವರು ಹಾಗೂ ದುಡಿಯುವ ವರ್ಗದ ಜನರತ್ತ ಬೆನ್ನು ಮಾಡಿ ಅವರನ್ನು ನಿರ್ಲಕ್ಷಿಸುತ್ತಿದೆ. ಅದರ ಪೂರ್ಣ ಗಮನ ಕೆಲ ಬಂಡವಾಳಶಾಹಿಗಳತ್ತ ನೆಟ್ಟಿದೆ’ ಎಂದರು.
ಜ್ವರ ಬಂದಾಗ ಗೋಮೂತ್ರ ಕುಡೀರಿ: ಮದ್ರಾಸ್ ಐಐಟಿ ನಿರ್ದೇಶಕ ಸಲಹೆ
ಚೆನ್ನೈ: ಸನ್ಯಾಸಿಯೊಬ್ಬರ ಉದಾಹರಣೆ ನೀಡುತ್ತಾ, ಜ್ವರ ಬಂದಾಗ ಗೋಮೂತ್ರ ಕುಡಿಯಿರಿ ಎಂದು ಐಐಟಿ ಮದ್ರಾಸ್‌ನ ನಿರ್ದೇಶಕ ವಿ. ಕಾಮಕೋಟಿ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ಸಂಕ್ರಾಂತಿಯಂದು ಗೋ ಸಂರಕ್ಷಣ ಶಾಲೆಯಲ್ಲಿ ದೇಸೀ ತಳಿಯ ಹಸುಗಳ ರಕ್ಷಣೆ ಹಾಗೂ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರ ಮಹತ್ವದ ಕುರಿತು ಮಾತನಾಡಿದ ಅವರು, ‘ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಪಚನಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅದರಲ್ಲಿ ಔಷಧೀಯ ಗುಣಗಳೂ ಇವೆ. ಸನ್ಯಾಸಿಯೊಬ್ಬರು ಜ್ವರ ಬಂದಾಗ ಗೋಮೂತ್ರ ಕುಡಿದೇ ಸರಿಯಾಗುತ್ತಿದ್ದರು’ ಎಂದರು.
ಕಾಮಕೋಟಿಯವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ದ್ರಾವಿಡ ಕಳಗಂ, ‘ಇದು ಸುಳ್ಳು ಹಾಗೂ ನಾಚಿಕೆಗೇಡಿನ ಹೇಳಿಕೆ’ ಎಂದಿದೆ. ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್, ‘ದೇಶದಲ್ಲಿ ಶಿಕ್ಷಣವನ್ನು ಕೆಡಿಸುವುದೇ ಕೇಂದ್ರ ಸರ್ಕಾರದ ಉದ್ದೇಶ’ ಎಂದು ಕಿಡಿ ಕಾರಿದ್ದಾರೆ.
ಚಂದ್ರಬಾಬು ಪುತ್ರಗೆ ಡಿಸಿಎಂ ಪಟ್ಟ: ಹೆಚ್ಚಿದ ಒತ್ತಡ
ಅಮರಾವತಿ: ಆಂಧ್ರ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಪುತ್ರ ಹಾಗೂ ಅವರ ಸಂಪುಟದಲ್ಲಿನ ಸಚಿವ ನಾರಾ ಲೋಕೇಶ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಕೂಗು ಇದೀಗ ತೆಲುಗು ದೇಶಂ ಪಕ್ಷದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಸದ್ಯ ಟಿಡಿಪಿಯ ಮಿತ್ರಪಕ್ಷವಾದ ಜನಸೇನೆಯ ಮುಖ್ಯಸ್ಥ ಪವನ್ ಕಲ್ಯಾಣ್ ಅವರಷ್ಟೇ ಚಂದ್ರಬಾಬು ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಹೊಂದಿದ್ದಾರೆ. ಇದೀಗ ಚಂದ್ರಬಾಬು ಪುತ್ರಗೂ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಬೇಡಿಕೆ ಟಿಡಿಪಿ ನಾಯಕರಿಂದ ಕೇಳಿ ಬರುತ್ತಿರುವುದು ಕುತೂಹಲ ಮೂಡಿಸಿದೆ. ಪವನ್ ಕಲ್ಯಾಣ್‌ಗೆ ಲಗಾಮು ಹಾಕಬೇಕೆಂದೇ ಈ ಆಗ್ರಹ ಮಾಡಲಾಗುತ್ತಿದೆ ಎಂಬ ಊಹೆ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪವನ್ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪವನ್ ಪಕ್ಷದಲ್ಲಿ ಈಗಾಗಲೇ ಇದ್ಕಕೆ ವಿರೋಧ ವ್ಯಕ್ತವಾಗಿದ ಎಂದು ಮೂಲಗಳು ಹೇಳಿವೆ.ಲೋಕೇಶ್‌ಗೇಕೆ ಬೆಂಬಲ?:
ಲೋಕೇಶ್ ನಾಯಕತ್ವದಡಿ ಸುಮಾರು 1ಕೋಟಿ ಸದಸ್ಯರ ನೋಂದಣಿ ಆಗಿದೆ. ಅಲ್ಲದೆ, ಪಕ್ಷದ ಭವಿಷ್ಯದ ನಾಯಕನಾಗಿ ಲೋಕೇಶ್ ಅವರನ್ನು ಬಿಂಬಿಸುವ ಸಮಯವೂ ಈಗ ಬಂದಿದೆ ಎಂದು ಟಿಡಿಪಿ ನಾಯರು ತಿಳಿಸಿದ್ದಾರೆ.
ಟಿಡಿಪಿ ಮೂಲಗಳ ಪ್ರಕಾರ, ಪಕ್ಷದ ಆಂತರಿಕ ಸಭೆಯಲ್ಲಿ ಲೋಕೇಶ್ ಅವರನ್ನು ಡಿಸಿಎಂ ಮಾಡಬೇಕೆಂಬ ಬೇಡಿಕೆ ಕುರಿತು ಚರ್ಚೆಯೂ ಆಗಿದೆ. ನಾಯ್ಡು ಅವರ ಉಪಸ್ಥಿತಿಯಲ್ಲಿ ಕಡಪ ಜಿಲ್ಲೆಯಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಟಿಡಿಪಿ ಹಿರಿಯ ನಾಯಕ ಶ್ರೀನಿವಾಸ ರೆಡ್ಡಿ ಅವರು ಯುವಕರು ಮತ್ತು ಪಕ್ಷದ ಬೆಂಬಲಿಗರಲ್ಲಿ ವಿಶ್ವಾಸ ತುಂಬಲು ಲೋಕೇಶ್ ಅವರನ್ನು ಉನ್ನತ ಹುದ್ದೆಗೇರಿಸುವಂತೆ ಬೇಡಿಕೆ ಇಟ್ಟಿದ್ದರು. ಇನ್ನು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದ ಲೋಕೇಶ್ ಅವರು ಕೇವಲ ಮಂತ್ರಿಯಾಗಿರುವುದು ಸರಿಯಲ್ಲ, ಅವರಿಗೆ ಡಿಸಿಎಂ ಸ್ಥಾನ ನೀಡಬೇಕು, ಮುಂದಿನ ಮುಖ್ಯಮಂತ್ರಿಯಾಗಿ ಬಿಂಬಿಸಬೇಕೆಂದು ಟಿಪಿಡಿ ವಕ್ತಾರ ಮಹಾಸೇನಾ ರಾಜೇಶ್ ಆಗ್ರಹಿಸಿದ್ದಾರೆ.