ಸಾರಾಂಶ
ಶಿಕ್ಷಕರ ನಿಂದನೆಯಿಂದ ಮನನೊಂದು ದೆಹಲಿಯ ವಿದ್ಯಾರ್ಥಿಯೊಬ್ಬ ಆತ್ಮಹ*ಗೆ ಶರಣಾದ ಬೆನ್ನಲ್ಲೇ, ಶಿಕ್ಷಕ ನೀಡಿದ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ನೇ*ಗೆ ಶರಣಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ರೇವಾ (ಮಧ್ಯಪ್ರದೇಶ) : ಶಿಕ್ಷಕರ ನಿಂದನೆಯಿಂದ ಮನನೊಂದು ದೆಹಲಿಯ ವಿದ್ಯಾರ್ಥಿಯೊಬ್ಬ ಆತ್ಮ*ತ್ಯೆಗೆ ಶರಣಾದ ಬೆನ್ನಲ್ಲೇ, ಶಿಕ್ಷಕ ನೀಡಿದ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ನೇ*ಗೆ ಶರಣಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 17 ವರ್ಷದ ವಿದ್ಯಾರ್ಥಿನಿ ನ.16ರಂದು ಸೇಮರಿಯಾದ ತನ್ನ ಮನೆಯಲ್ಲಿ ನೇ*ಗೆ ಕೊರಳೊಡ್ಡಿದ್ದಾಳೆ. ‘ಶಿಕ್ಷಕನೊಬ್ಬ ನನ್ನ ಕೈಹಿಡಿದು ಥಳಿಸಿದ್ದಲ್ಲದೆ, ತನ್ನ ಬಿಗಿಮುಷ್ಠಿಯನ್ನು ಬಿಡಿಸುವಂತೆ ಸವಾಲೊಡ್ಡಿದ. ಶಿಕ್ಷೆ ಕೊಡುವ ಉದ್ದೇಶದಿಂದ ನನ್ನ ಎರಡು ಬೆರಳುಗಳ ನಡುವೆ ಪೆನ್ನಿನ ಮೊನೆಯಿಂದ ಚುಚ್ಚಿದ’ ಎಂದು ಬರೆದ ಮರಣಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮರಾಠಿ ಮಾತಾಡದ್ದಕ್ಕೆ ರೈಲಲ್ಲಿ ಥಳಿತ: ಮನನೊಂದು ವಿದ್ಯಾರ್ಥಿ ಆತ್ಮ*ತ್ಯೆ
ಮುಂಬೈ: ಮಹಾರಾಷ್ಟ್ರದಲ್ಲಿ ಭಾಷೆ ವಿಚಾರವಾಗಿ ಅವಾಂತರಗಳು ಮುಂದುವರಿದಿದ್ದು, ಮರಾಠಿಯಲ್ಲಿ ಮಾತನಾಡದ ವಿದ್ಯಾರ್ಥಿಗೆ ರೈಲಿನಲ್ಲಿ ಗುಂಪೊಂದು ಥಳಿಸಿದ ಕಾರಣ ಆತ ಮನನೊಂದು ಆತ್ಮ*ತ್ಯೆಗೆ ಶರಣಾದ ಘಟನೆ ಥಾಣೆಯ ತಿಸ್ಗಾವ್ ನಾಕಾದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಅರ್ನವ್ ಲಕ್ಷ್ಮಣ ಖೈರೆ (17) ಎಂದು ಗುರುತಿಸಲಾಗಿದೆ.
ಆಗಿದ್ದೇನು?:
ವಿದ್ಯಾರ್ಥಿಯು ನ.18ರಂದು ಸ್ಥಳೀಯ ರೈಲಿನಲ್ಲಿ ಮುಲುಂಡ್‌ನಲ್ಲಿದ್ದ ತನ್ನ ಕಾಲೇಜಿಗೆ ತೆರಳುತ್ತಿದ್ದ. ಈ ವೇಳೆ ಸಹಪ್ರಯಾಣಿಕನೊಬ್ಬನನ್ನು ಮುಂದೆ ಸರಿಯುವಂತೆ ಹಿಂದಿಯಲ್ಲಿ ಮನವಿ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ 4-5 ಮಂದಿಯ ಗುಂಪು ವಿದ್ಯಾರ್ಥಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ. ಇದರಿಂದ ತೀವ್ರವಾಗಿ ನೊಂದ ವಿದ್ಯಾರ್ಥಿ ಕಾಲೇಜು ಮುಗಿಸಿ ಸಂಜೆ ಮನೆಗೆ ಬರುತ್ತಿದ್ದಂತೆ ನೇ*ಗೆ ಶರಣಾಗಿದ್ದಾನೆ. ವಿದ್ಯಾರ್ಥಿಯ ತಂದೆ ಕೋಲಸೆವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.
)
