ಸಾರಾಂಶ
ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಲು ಬೆಂಗಳೂರು ಬುಲ್ಸ್ ಸತತ 3ನೇ ಪಂದ್ಯದಲ್ಲೂ ವಿಫಲವಾಗಿದೆ. ಯು-ಮುಂಬಾ ವಿರುದ್ಧದ ಪಂದ್ಯದಲ್ಲಿ 28-48 ಅಂಕಗಳ ಹೀನಾಯ ಸೋಲಿನಿಂದಿಗೆ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಮೊದಲ ತಂಡ ಎನ್ನುವ ಅಪಖ್ಯಾತಿಗೆ ಗುರಿಯಾಯಿತು.
ವಿಶಾಖಪಟ್ಟಣಂ: ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಲು ಬೆಂಗಳೂರು ಬುಲ್ಸ್ ಸತತ 3ನೇ ಪಂದ್ಯದಲ್ಲೂ ವಿಫಲವಾಗಿದೆ. ಶುಕ್ರವಾರ ನಡೆದ ಯು-ಮುಂಬಾ ವಿರುದ್ಧದ ಪಂದ್ಯದಲ್ಲಿ 28-48 ಅಂಕಗಳ ಹೀನಾಯ ಸೋಲಿನಿಂದಿಗೆ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಮೊದಲ ತಂಡ ಎನ್ನುವ ಅಪಖ್ಯಾತಿಗೆ ಗುರಿಯಾಯಿತು.
ಅಫೆನ್ಸ್ ಹಾಗೂ ಡಿಫೆನ್ಸ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದ ಬುಲ್ಸ್, ಯಾವ ಹಂತದಲ್ಲೂ ಪಂದ್ಯದ ಮೇಲೆ ಹಿಡಿತ ಸಾಧಿಸುವ ಲಕ್ಷಣ ತೋರಲಿಲ್ಲ. 14ನೇ ನಿಮಿಷದಲ್ಲಿ ಮುಂಬಾದ ಅಜಿತ್ ಚೌಹಾಣ್ ಒಂದೇ ರೈಡ್‌ನಲ್ಲಿ ಬುಲ್ಸ್‌ನ 6 ಆಟಗಾರರನ್ನು ಔಟ್ ಮಾಡಿ ಆಘಾತ ನೀಡಿದರು. 15ನೇ ನಿಮಿಷದಲ್ಲಿ ಆಲೌಟ್ ಆದ ಬುಲ್ಸ್ 7-23ರ ಹಿನ್ನಡೆ ಕಂಡಿತು. ಅಲ್ಲಿಂದಾಚೆಗೆ ತಂಡ ಚೇತರಿಸಿಕೊಳ್ಳಲಿಲ್ಲ.
ಮೊದಲಾರ್ಧದ ಅಂತ್ಯಕ್ಕೆ 12-29ರಿಂದ ಹಿಂದಿದ್ದ ಬುಲ್ಸ್, ದ್ವಿತೀಯಾರ್ಧದಲ್ಲಿ ಕೇವಲ 8 ಅಂಕ ಗಳಿಸಿತು. ಅಂತಿಮವಾಗಿ 20 ಅಂಕಗಳ ಅಂತರದಲ್ಲಿ ಸೋಲುಂಡು ನಿರಾಸೆ ಅನುಭವಿಸಿತು.
ತಂಡಕ್ಕೆ ಮುಂದಿನ 3 ಪಂದ್ಯಗಳಲ್ಲಿ ಕ್ರಮವಾಗಿ ಪಾಟ್ನಾ ಪೈರೇಟ್ಸ್, ಹರ್ಯಾಣ ಸ್ಟೀಲರ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರಾಗಲಿವೆ. ಮೂರು ಪಂದ್ಯಗಳಲ್ಲಿ ಬುಲ್ಸ್‌ಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದ್ದು, ತಂಡ ಪುಟಿದೇಳಬೇಕಿದ್ದರೆ ಅಸಾಧಾರಣ ಪ್ರದರ್ಶನ ತೋರಬೇಕಿದೆ. ಹರ್ಯಾಣಕ್ಕೆ ಜಯ
ಶುಕ್ರವಾರದ 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರ್ಯಾಣ ಸ್ಟೀಲರ್ಸ್ 37-32 ಅಂಕಗಳ ಅಂತರದಲ್ಲಿ ಯುಪಿ ಯೋಧಾಸ್ ವಿರುದ್ಧ ಗೆಲುವು ಸಾಧಿಸಿತು.

;Resize=(128,128))
;Resize=(128,128))
;Resize=(128,128))