ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿ ಮತ್ತು ನದಿಗಳ ಜೋಡಣೆ ಮಾಡಬೇಕು ಎಂದು ಒತ್ತಾಯಿಸಿ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ತಮಿಳುನಾಡಿದ ರೈತರು ಮರ, ಮೊಬೈಲ್‌ ಟವರ್‌ ಹತ್ತಿ ಪ್ರತಿಭಟನೆ ಮಾಡಿದ್ದಾರೆ.

ನವದೆಹಲಿ: ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿ ಮತ್ತು ನದಿಗಳ ಜೋಡಣೆ ಮಾಡಬೇಕು ಎಂದು ಒತ್ತಾಯಿಸಿ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ತಮಿಳುನಾಡಿದ ರೈತರು ಮರ, ಮೊಬೈಲ್‌ ಟವರ್‌ ಹತ್ತಿ ಪ್ರತಿಭಟನೆ ಮಾಡಿದ್ದಾರೆ.

ತಮಿಳುನಾಡಿನ 100 ಕ್ಕೂ ಹೆಚ್ಚು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಮಹಿಳೆ ಸೇರಿದಂತೆ ಇಬ್ಬರು ಮರ, ಮೊಬೈಲ್‌ ಟವರ್‌ ಹತ್ತಿ ಪ್ರತಿಭಟನೆ ನಡೆಸಿದರು.

ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿ ಪಡಿಸಬೇಕು ಮತ್ತು ಭಾರತದ ಎಲ್ಲಾ ನದಿಗಳನ್ನು ಜೋಡಣೆ ಮಾಡಬೇಕು, ರೈತರಿಗೆ 5 ಸಾವಿರ ರು ಪಿಂಚಣಿ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಮರ, ಮೊಬೈಲ್‌ ಟವರ್‌ ಹತ್ತಿ ಪ್ರತಿಭಟಿಸುತ್ತಿದ್ದವರನ್ನು ಪೊಲೀಸರು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.