ರಾಜನಾಥ್‌ ಸಿಂಗ್‌ ಹೇಳಿಕೆ ಪ್ರಚೋದನಾಕಾರಿ: ಪಾಕ್‌

| Published : Apr 07 2024, 01:46 AM IST / Updated: Apr 07 2024, 05:30 AM IST

ಸಾರಾಂಶ

ಭಾರತದಲ್ಲಿ ದುಷ್ಕೃತ್ಯ ಎಸಗುವ ಉಗ್ರರು ಪಾಕಿಸ್ತಾನದೊಳಗೆ ನುಗ್ಗಿದರೂ, ಆ ದೇಶದೊಳಗೆ ನುಗ್ಗಿ ಹೊಡಿತೀವೆ ಎಂಬ ಭಾರತದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿಕೆ ಪ್ರಚೋದನಾಕಾರಿಯಾಗಿದೆ ಮತ್ತು ಶಾಂತಿ ಕದಡುವಂತಿದೆ ಎಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.

ನವದೆಹಲಿ: ಭಾರತದಲ್ಲಿ ದುಷ್ಕೃತ್ಯ ಎಸಗುವ ಉಗ್ರರು ಪಾಕಿಸ್ತಾನದೊಳಗೆ ನುಗ್ಗಿದರೂ, ಆ ದೇಶದೊಳಗೆ ನುಗ್ಗಿ ಹೊಡಿತೀವೆ ಎಂಬ ಭಾರತದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿಕೆ ಪ್ರಚೋದನಾಕಾರಿಯಾಗಿದೆ ಮತ್ತು ಶಾಂತಿ ಕದಡುವಂತಿದೆ ಎಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.

ಸಿಂಗ್‌ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ, ‘ಭಾರತ ಸರ್ಕಾರ, ಪಾಕಿಸ್ತಾನದೊಳಗಿನ ನಾಗರಿಕರನ್ನು ‘ಉಗ್ರರು’ಎಂದು ಕರೆದು ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಂತಾರಾಷ್ಟ್ರೀಯ ಸಮಯದಾಯವು ಭಾರತದ ಈ ಹೀನ ಹಾಗೂ ದುಷ್ಕೃತ್ಯವನ್ನು ತಡೆಯಬೇಕು’ ಎಂದು ಕಿಡಿಕಾರಿದೆ.

ಪಾಕಿಸ್ತಾನದಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಹತರಾದ 20ಕ್ಕೂ ಹೆಚ್ಚು ಉಗ್ರರ ಸಾವಿಗೆ ಭಾರತ ಕಾರಣ ಎಂದು ಬ್ರಿಟನ್‌ನ ಗಾರ್ಡಿಯನ್‌ ಪತ್ರಿಕೆ ವರದಿಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾರತಕ್ಕೆ ತೊಂದರೆ ಕೊಡುವವರು ಪಾಕಿಸ್ತಾನಕ್ಕೆ ತೆರಳಿದರೂ, ಅಲ್ಲೇ ಹೊಗಿ ಕೊಲ್ಲುತ್ತೇವೆ’ ಎಂದಿದ್ದರು.