ಸಾರಾಂಶ
ಪುಣೆ: ಸಹೋದ್ಯೋಗಿಯೊಬ್ಬಳು ಸುಳ್ಳು ಕಾರಣ ನೀಡಿ ಹಣ ಪಡೆದಿದ್ದಲ್ಲದೆ, ಆ ಹಣವನ್ನು ಮರಳಿಸಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕಂಪನಿಯ ಆವರಣದಲ್ಲಿಯೇ ನೌಕರನೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿನ ಯೆರವಡಾದಲ್ಲಿ ಮಂಗಳವಾರ ನಡೆದಿದೆ.
ಪುಣೆ: ಸಹೋದ್ಯೋಗಿಯೊಬ್ಬಳು ಸುಳ್ಳು ಕಾರಣ ನೀಡಿ ಹಣ ಪಡೆದಿದ್ದಲ್ಲದೆ, ಆ ಹಣವನ್ನು ಮರಳಿಸಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕಂಪನಿಯ ಆವರಣದಲ್ಲಿಯೇ ನೌಕರನೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿನ ಯೆರವಡಾದಲ್ಲಿ ಮಂಗಳವಾರ ನಡೆದಿದೆ.
ಶುಭದಾ ಕೊಡಾರೆ (28) ಮೃತ ಬಿಪಿಒ ನೌಕರಸ್ಥೆ. ಆರೋಪಿಯನ್ನು ಕೃಷ್ಣ ಕನೋಜಾ(30) ಎಂದು ಗುರುತಿಸಲಾಗಿದ್ದು, ಈತ ಡಬ್ಲ್ಯು.ಎನ್.ಎಸ್ ಗ್ಲೋಬಲ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ.ಏನಿದು ಘಟನೆ?:
ತನ್ನ ತಂದೆಯ ಅನಾರೋಗ್ಯದ ಕಾರಣ ನೀಡಿ ಶುಭದಾ ಕೊಡಾರೆ ಎಂಬಾಕೆ ಕೃಷ್ಣನಿಂದ ಹಲವು ಬಾರಿ ಹಣ ಪಡೆದಿದ್ದಳು. ಆತ ಅದನ್ನು ಮರಳಿ ಕೇಳಿದಾಗಲೆಲ್ಲಾ ತಂದೆಯ ಚಿಕಿತ್ಸೆಯ ಪ್ರಸ್ತಾಪ ಮಾಡುತ್ತಿದ್ದಳು. ಈ ಕುರಿತು ಶೂಭದಾಳ ಊರಿಗೆ ಹೋಗಿ ವಿಚಾರಿಸಿದಾಗ ಆಕೆಯ ತಂದೆ ಸೌಖ್ಯವಾಗಿರುವುದು ತಿಳಿದಿದೆ. ಬಳಿಕ ಆಕೆಯನ್ನು ಕಂಪನಿಯ ಪಾರ್ಕಿಂಗ್ ಬಳಿ ಕರೆದ ಕೃಷ್ಣ ಮತ್ತೆ ಹಣವನ್ನು ಮರಲಿಸುವಂತೆ ಕೇಳಿದ್ದಾನೆ. ಆಗ ಅವರಿಬ್ಬರ ನಡುವೆ ವಾಗ್ವಾದ ಬೆಳೆದು, ಮಾಂಸ ಕೊಯ್ಯುವ ಮಚ್ಚಿನಿಂದ ಕೃಷ್ಣ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಅಲ್ಲಿದ್ದವರಾರೂ ಸಹಾಯಕ್ಕೆ ಬರದೆ, ಶುಭದಾ ಸಾವನ್ನಪ್ಪಿದ್ದಾಳೆ.