ಹೆದ್ದಾರೀಲಿ ಟ್ರ್ಯಾಕ್ಟರ್‌ ಟ್ರಾಲಿ ನಿಷಿದ್ಧ: ರೈತರಿಗೆ ಹೈ ಚಾಟಿ

| Published : Feb 21 2024, 02:02 AM IST / Updated: Feb 21 2024, 08:58 AM IST

ಹೆದ್ದಾರೀಲಿ ಟ್ರ್ಯಾಕ್ಟರ್‌ ಟ್ರಾಲಿ ನಿಷಿದ್ಧ: ರೈತರಿಗೆ ಹೈ ಚಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮೋಟಾರು ವಾಹನ ಕಾಯಿದೆ ಅನುಸಾರ ಟ್ರ್ಯಾಕ್ಟರ್‌ ಟ್ರಾಲಿಗೆ ನಿರ್ಬಂಧ ವಿಧಿಸಲಾಗಿದ್ದು, ರೈತರು ಸಾಂವಿಧಾನಿಕ ಕರ್ತವ್ಯಗಳಿಗೆ ಬದ್ಧರಾಗಿರಬೇಕು ಎಂದು ಪಂಜಾಬ್‌ ಹೈಕೋರ್ಟ್‌ ಸೂಚಿಸಿದೆ.

ಚಂಡೀಗಢ: ಮೋಟಾರು ವಾಹನ ಕಾಯ್ದೆ ಪ್ರಕಾರ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್‌ ಟ್ರಾಲಿಗಳನ್ನು ಬಳಸುವಂತಿಲ್ಲ. ರೈತರು ತಮ್ಮ ಸಾಂವಿಧಾನಿಕ ಕರ್ತವ್ಯಗಳಿಗೆ ಬದ್ಧರಾಗಿರಬೇಕು ಎಂದು ‘ದೆಹಲಿ ಚಲೋ’ ಪ್ರತಿಭಟನಾನಿರತ ರೈತರನ್ನು ಪಂಜಾಬ್‌- ಹರ್ಯಾಣ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ರೈತರ ಪ್ರತಿಭಟನೆ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ನೀವು (ರೈತರು) ಅಮೃತಸರದಿಂದ ದೆಹಲಿಗೆ ಟ್ರಾಲಿಗಳಲ್ಲಿ ಪ್ರಯಾಣಿಸುತ್ತಿದ್ದೀರಿ. 

ಆದರೆ ಮೋಟಾರು ವಾಹನ ಕಾಯಿದೆ ಪ್ರಕಾರ ಹೆದ್ದಾರಿಯಲ್ಲಿ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್‌ ಟ್ರಾಲಿಗಳನ್ನು ಬಳಸುವಂತಿಲ್ಲ. ಪ್ರತಿಯೊಬ್ಬರಿಗೂ ಅವರ ಮೂಲಭೂತ ಹಕ್ಕುಗಳು ತಿಳಿದಿವೆ. 

ಆದರೆ ಕೆಲವು ಸಾಂವಿಧಾನಿಕ ಕರ್ತವ್ಯಗಳನ್ನೂ ಕೂಡ ಅನುಸರಿಸಬೇಕು’ ಎಂದು ರೈತರಿಗೆ ಕೋರ್ಟ್ ಚಾಟಿ ಬೀಸಿದೆ. ಅದಾಗ್ಯೂ‘ಅವರಿಗೆ ಪ್ರತಿಭಟಿಸುವ ಹಕ್ಕಿದೆ. 

ಆದರೆ ಇದು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಎಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡದಂತೆ ನೋಡಿಕೊಳ್ಳಿರಿ’ ಎಂದು ಪಂಜಾಬ್‌ ಸರ್ಕಾರಕ್ಕೆ ಸೂಚಿಸಿದೆ.