ಸುಡು ಬಿಸಿಲಲ್ಲಿ ಪುಶ್‌ಅಪ್‌ ರ್‍ಯಾಗಿಂಗ್‌: ವಿದ್ಯಾರ್ಥಿಗೆ ಡಯಾಲಿಸಿಸ್‌, ಚೇತರಿಕೆ

| Published : Jun 28 2024, 12:49 AM IST / Updated: Jun 28 2024, 04:57 AM IST

ಸುಡು ಬಿಸಿಲಲ್ಲಿ ಪುಶ್‌ಅಪ್‌ ರ್‍ಯಾಗಿಂಗ್‌: ವಿದ್ಯಾರ್ಥಿಗೆ ಡಯಾಲಿಸಿಸ್‌, ಚೇತರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನದ ಡುಂಗುರ್‌ಪುರದ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸುಡುಬಿಸಿಲಿನಲ್ಲಿ 350 ಪುಶ್‌ಅಪ್‌ ಮಾಡುವಂತೆ ರ್‍ಯಾಗಿಂಗ್‌ ಮಾಡಿದ ಘಟನೆ ನಡೆದಿದೆ.

ಜೈಪುರ: ರಾಜಸ್ಥಾನದ ಡುಂಗುರ್‌ಪುರದ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸುಡುಬಿಸಿಲಿನಲ್ಲಿ 350 ಪುಶ್‌ಅಪ್‌ ಮಾಡುವಂತೆ ರ್‍ಯಾಗಿಂಗ್‌ ಮಾಡಿದ ಘಟನೆ ನಡೆದಿದೆ. ಈ ವೇಳೆ ತೀವ್ರ ಆಯಾಸಗೊಂಡಿದ್ದ ಒಬ್ಬ ವಿದ್ಯಾರ್ಥಿ ಡಯಾಲಿಸಿಸ್‌ಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮೇ 15ರಂದು ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್‌ ಹೆಸರಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 350 ಪುಶ್‌ಅಪ್ಸ್‌ ಮಾಡುವಂತೆ ಸೂಚಿಸಿದ್ದು, ಅದರಂತೆ ಎಲ್ಲರೂ ಮಾಡಿದ್ದಾರೆ. ಅಷ್ಟು ಪುಶ್‌ಅಪ್‌ಗಳನ್ನು ಒಮ್ಮೆಲೆ ಮಾಡಿದ್ದರಿಂದ ಎಲ್ಲರೂ ದಣಿದಿದ್ದಾರೆ. ಅದರಲ್ಲಿ ಪ್ರಥಮ್‌ ವ್ಯಾಸ್‌ ಎಂಬ ವಿದ್ಯಾರ್ಥಿಗೆ ಮೂತ್ರಪಿಂಡ ಹಾಗೂ ಯಕೃತ್ತಿನಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿದೆ.

ಆತನನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದು, ಮೂರು ಬಾರಿ ಡಯಾಲಿಸಿಸ್‌ಗೆ ಒಳಪಡಿಸಿದ್ದಾರೆ. ಈಗ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾನೆ. ಈ ಬಗ್ಗೆ ಆತನ ತಂದೆ ಕಾಲೇಜಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ರ್‍ಯಾಗಿಂಗ್‌ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಅಮಾನತು ಮಾಡಿದೆ.