ಸಾರಾಂಶ
ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದು, ದೇಶದ ಯುವಕರಿಗೆ ಮೊಬೈಲ್ ಮತ್ತು ಶ್ರೀರಾಮ ಭಜನೆಯ ಗೀಳು ಹತ್ತಿಸಿ ಅವರನ್ನು ಹಸಿವಿನಿಂದ ಸಾಯಲು ಬಯಸಿದ್ದಾರೆ ಎಂದಿದ್ದಾರೆ.
ಶಾಜಾಪುರ್: ರಾಷ್ಟ್ರದ ಯುವಜನತೆ ಸದಾಕಾಲ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾ, ದಿನವಿಡೀ ಜೈ ಶ್ರೀರಾಂ ಘೋಷಣೆಯನ್ನು ಕೂಗುತ್ತಾ ಹಸಿವಿನಿಂದ ಸಾಯಬೇಕೆಂಬುದು ಪ್ರಧಾನಿ ಮೋದಿ ಬಯಕೆಯಾಗಿದೆ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದ ಸೃಷ್ಟಿಸಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ಸಾಗುವ ವೇಳೆ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಂ ಘೋಷಣೆ ಕೂಗಿದ್ದಕ್ಕೆ ತಿರುಗೇಟು ನೀಡಿದ ರಾಹುಲ್, ‘ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದರೂ ಉದ್ಯೋಗ ಸೃಷ್ಟಿಗೆ ಒತ್ತು ನೀಡದೆ ಪ್ರಧಾನಿ ಮೋದಿಯವರು ದೇಶದ ಯುವಜನತೆಯನ್ನು ಜಾತಿಯ ಹೆಸರಿನಲ್ಲಿ ಎತ್ತಿಕಟ್ಟಿ ಅವರು ಶ್ರೀರಾಮನ ಘೋಷಣೆ ಕೂಗುತ್ತಾ ಹಸಿವಿನಿಂದ ಸಾಯಲಿ ಎಂದು ಬಯಸಿದ್ದಾರೆ’ ಎಂದಿದ್ದಾರೆ.